ಬೆಂಗಳೂರು: ಕೃಷ್ಣರಾಜೇಂದ್ರ ಮಾರುಕಟ್ಟೆಯ ಹತ್ತಿರದ ಮೇಲ್ಸೇತುವೆಯ ಮೇಲೆ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ನೋಟುಗಳನ್ನು ಕೆಳಕ್ಕೆ ಎಸೆದು ಜನಜಂಗುಳಿ ಆಗುವಂತೆ ಮಾಡಿದ್ದಾನೆ.
Image courtesy
ಕೆಲವರು ಮೊಬಾಯಿಲ್‌ನಲ್ಲಿ ಸೆರೆ ಹಿಡಿದ ವೀಡಿಯೋದಂತೆ ಕೋಟು, ಪ್ಯಾಂಟಿನಲ್ಲಿ ಇದ್ದ ವ್ಯಕ್ತಿ ಕುತ್ತಿಗೆಗೆ ಒಂದು ಗಡಿಯಾರ ನೇತು ಹಾಕಿಕೊಂಡಿದ್ದ. ಚೀಲದಿಂದ ಹಣ ಕೆಳಕ್ಕೆ ಎಸೆದಿದ್ದ. ಕೆಲವು ವಾಹನ ಸವಾರರು ಆತನ ಬಳಿಗೆ ಬಂದು ಹಣ ಕೇಳುವುದೂ ವೀಡಿಯೋದಲ್ಲಿ ಮೂಡಿದೆ.
ಜನ ಗುಂಪು ಸೇರಿದಂತೆ ಸುದ್ದಿ ಹೋಗಿ ಪೋಲೀಸರು ಬರುವಾಗ ಹಣ ಬಿಸಾಡಿದ ವ್ಯಕ್ತಿ ವಾಹನದಲ್ಲಿ ಹೋಗಿ ಆಗಿತ್ತು. ಆತ ಹತ್ತು ರೂಪಾಯಿ ನೋಟುಗಳ ಮೂರು ಕಟ್ಟು ಎಂದರೆ ರೂ. 3,000ದಷ್ಟು ಎಸೆದು ಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅರುಣ್ ಎಂಬ ವ್ಯಕ್ತಿ ಬೆಂಗಳೂರಿನಲ್ಲಿ ಹಣ ಎಸೆದಿರುವುದು ಗೊತ್ತಾಗಿದೆ. ಒಳ್ಳೆಯ ಉದ್ದೇಶದಿಂದ ಹಣ ಎಸೆದಿದ್ದೇನೆ. ಸ್ವಲ್ಪ ಕಾಲಾವಕಾಶ ಕೊಡಿ ತಿಳಿಸುತ್ತೇನೆ ಎಂದು ಅರುಣ್ ಮಾಧ್ಯಮಗಳವರಿಗೆ ತಿಳಿಸಿದ್ದಾನೆ. ಪೋಲೀಸರು ಮೊಕದ್ದಮೆ ಹೂಡಿದ್ದಾರೆ.