ಭಾರತೀಯ ಕುಸ್ತಿ ಫೆಡರೇಶನ್‌ನ ಮೇಲುಸ್ತುವಾರಿ ನೋಡಲು ಮತ್ತು ಅದರ ಅಧ್ಯಕ್ಷ ಬಿಜೆಪಿ ಸಂಸದರ ಮೇಲೆ ಇರುವ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಲು ಕೇಂದ್ರ ಕ್ರೀಡಾ ಮಂತ್ರಿ ಅನುರಾಗ ಠಾಕೂರ್ ಅವರು ಮಹಿಳಾ ಬಾಕ್ಸರ್ ಎಂ. ಸಿ. ಮೇರಿ ಕೋಮ್ ಅಧ್ಯಕ್ಷತೆಯಲ್ಲಿ ಪಂಚರ ಸಮಿತಿಯನ್ನು ರಚಿಸಿದ್ದಾರೆ.

Image Credit: Newsmobile

ಒಲಿಂಪಿಕ್ ಕುಸ್ತಿ ಪದಕ ವಿಜೇತ ಯೋಗೇಶ್ವರ ದತ್, ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮುರ್ಕುಂಡೆ, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸಂಸ್ಥೆಯ ಮಾಜೀ ಸಿಇಒ ರಾಜಗೋಪಾಲನ್ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಮಾಜೀ ಕಾರ್ಯ ನಿರ್ವಾಹಕ ನಿರ್ದೇಶಕಿ ರಾಧಿಕಾ ಶ್ರೀಮನ್ ಇದರ ಸದಸ್ಯರು.

ಕುಸ್ತಿ ಫೆಡರೇಶನ್ ಆಡಳಿತ ಮಂಡಳಿ ಬರ್ಕಾಸ್ತ್ ಆಗಿದ್ದು, ಉಸ್ತುವಾರಿ ಸದ್ಯ ಈ ಸಮಿತಿಯ ವಶಕ್ಕೆ ನೀಡಲಾಗಿದೆ. ಲೈಂಗಿಕ ಕಿರುಕುಳದ ಆರೋಪಿ ಬಿಜೆಪಿ ಸಂಸದನ ಕೃತ್ಯದ ಬಗೆಗೆ ತನಿಖೆ ನಡೆಸಿ ವರದಿ ನೀಡುವಂತೆ ಸಮಿತಿಗೆ ಗಡುವನ್ನು ಕೂಡ ನೀಡಲಾಗಿದೆ.

ಭಾರತೀಯ ಒಲಿಂಪಿಕ್ಸ್ ಎಸೋಸಿಯೇಶನ್ ಸಹ ಕುಸ್ತಿ ಸಂಸ್ಥೆ ಡಬ್ಲ್ಯುಎಎಫ್ಐ ಅವ್ಯವಹಾರ, ಲೈಂಗಿಕ ಕಿರುಕುಳದ ಬಗೆಗೆ ತನಿಖೆ ನಡೆಸಲು ಒಂದು ಏಳು ಜನರ ಸಮಿತಿಯನ್ನು ನೇಮಿಸಿದೆ. ಮೇರಿ ಕೋಮ್ ಮತ್ತು ಯೋಗೇಶ್ವರ ದತ್ ಆ ಸಮಿತಿಯಲ್ಲೂ ಸದಸ್ಯರಿದ್ದಾರೆ.