ಕಿನ್ನಿಗೋಳಿ: ಐಕಳ ಬಾವ ಕಾಂತಾಬಾರೆ ಬೂದಾಬಾರೆ ಜೋಡು ಕರೆ ಕಂಬಳವು ಫೆಬ್ರವರಿ ತಿಂಗಳ 4 ರಂದು ಬೆಳಿಗ್ಗೆ 8:30 ಕ್ಕೆ ಸರಿಯಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಲಿರುವುದು.
ಈ ವರ್ಷದ ಕಂಬಳವು ಡಾಕ್ಟರ್ ದೇವಿ ಪ್ರಸಾದ್ ಶೆಟ್ಟಿ ಐಕ್ಕಳ ಭಾವ ಬೆಳಪು ಇವರ ಅಧ್ಯಕ್ಷತೆಯಲ್ಲಿ ನೇತೃತ್ವದಲ್ಲಿ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು ಶ್ರೀ ಶ್ರೀ ಚಂದ್ರಶೇಖರ್ ಸ್ವಾಮೀಜಿಯವರು ವೈಜ್ಞಾನಿಕ ಜ್ಯೋತಿಷ್ಯರು ಮತ್ತು ಅಂತರಾಷ್ಟ್ರೀಯ ವಾಸ್ತು ತಜ್ಞರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆ ಡಾ. ಕೆ.ಪಿ.ಕೆ. ಹೆಗ್ಡೆ ಅಧ್ಯಕ್ಷರು ಐಕಳಬಾವ ಕುಟುಂಬಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ), ಕಂಬಳದ ಕರೆಗಳ ಉದ್ಘಾಟನೆ ಕಿಶೋರ್ ಆಳ್ವ ಅಧ್ಯಕ್ಷರು ಅದಾನಿ ಫೌಂಡೇಶನ್, ದಕ್ಷಿಣ ಭಾರತ ಗೌರವ ಉಪಸ್ಥಿತಿ ವೇದಮೂರ್ತಿ ಅನಂತ ಅಸ್ರಣ್ಣರು ಅನುವಂಶಿಯ ಮುಕ್ತೇಸರರು ಶ್ರೀ ಕ್ಷೇತ್ರ ಕಟೀಲು ಮತ್ತು ಹಲವು ಗಣ್ಯ ವ್ಯಕ್ತಿಗಳು ಉದ್ಘಾಟನೆ ಸಮಾರಂಭಕ್ಕೆ ಆಗಮಿಸಲಿದ್ದಾರೆ.
ಸಂಜೆ 6.30 ಗಂಟೆಗೆ ಸಭಾ ಕಾರ್ಯಕ್ರಮವನ್ನು ನಡೆಯಲಿದ್ದು ರಾಜಶ್ರೀ ಡಾಕ್ಟರ್ ವೀರೇಂದ್ರ ಹೆಗ್ಡೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು, ರಾಜ್ಯಸಭಾ ಸದಸ್ಯರು ಭಾರತ ಸರ್ಕಾರ ಇವರು ಆಶೀರ್ವಚನಗಳನ್ನು ನೀಡಲಿದ್ದಾರೆ.
ಸಹಕಾರಿ ರತ್ನ ಡಾ. ಎಂ ಎಸ್ ರಾಜೇಂದ್ರ ಕುಮಾರ್ ಗೌರವಾಧ್ಯಕ್ಷರು ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ.
ಅಧ್ಯಕ್ಷತೆ ಸ್ಥಾನವನ್ನು ಡಾಕ್ಟರ್ ದೇವಿ ಪ್ರಸಾದ್ ಶೆಟ್ಟಿ ಐಕಳ ಬಾವ ಅಧ್ಯಕ್ಷರು ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ. ಗೌರವ ಉಪಸ್ಥಿತಿ ಹರೀಶ್ ಶೆಟ್ಟಿ ಐಕಳ ಅಧ್ಯಕ್ಷರು ಜಾಗತಿಕ ಬಂಟರ ಸಂಘ ಒಕ್ಕೂಟ (ರಿ), ಸುನಿಲ್ ಕುಮಾರ್ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಚಿವರು, ನಳಿನ್ ಕುಮಾರ್ ಕಟೀಲ್ ಸಂಸತ್ ಸದಸ್ಯರು ದಕ್ಷಿಣ ಕನ್ನಡ ರಾಜ್ಯದ್ಯಕ್ಷರು ಬಿಜೆಪಿ ಉಮನಾಥ್ ಕೋಟ್ಯನ್ ಶಾಸಕರು ಮುಲ್ಕಿ ಮೂಡುಬಿದ್ರಿ ಕ್ಷೇತ್ರ, ಸದಾಶಿವ ಶೆಟ್ಟಿ ಕನ್ಯಾನ ಆಡಳಿತ ನಿರ್ದೇಶಕರು ಹೇರಂಭಾ ಇಂಡಸ್ಟ್ರೀಸ್ ಮುಂಬೈ ಕೆ ಪ್ರಕಾಶ್ ಶೆಟ್ಟಿ ಆಡಳಿತ ನಿರ್ದೇಶಕರು ಎಮ್ ಆರ್ ಜಿ ಗ್ರೂಪ್ ಬೆಂಗಳೂರು ಡಾ ಜಿ ಶಂಕರ್ ಆಡಳಿತ ನಿರ್ದೇಶಕರು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ ಉಡುಪಿ ಮತ್ತು ಹಲವು ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ.
ಸಾಧಕರ ನೆಲೆಯಲ್ಲಿ ಸನ್ಮಾನಿಸಲಿರುವವರು ಕೆ ಪ್ರಕಾಶ್ ಶೆಟ್ಟಿ, ಸದಾಶಿವ ಶೆಟ್ಟಿ, ನಡೋಜ ಡಾಕ್ಟರ್ ಜಿ ಶಂಕರ್, ಹರೀಶ್ ಶೆಟ್ಟಿ ಐಕಳ, ಕಿಶೋರ್ ಆಳ್ವ, ಶಾಂಭವಿ ಶಂಕರ್ ಶೆಟ್ಟಿ, ಡಾಕ್ಟರ್ ಟಿ. ರಾಮನಾಥ್ ಶೆಟ್ಟಿ, ಮಂಜುನಾಥ್ ಭಂಡಾರಿ, ರೋಹನ್ ಮಂತ್ರಿ, ಮತ್ತು ಗುರುಕಿರಣ್.
ಕಾಂತಾಬಾರೆ ಬೂದಾಬಾರೆ ಕಂಬಳ ಓಟದ ಕೋಣಗಳ ಸ್ಪರ್ಧಿಗಳಾದ ಕನೆ ಹಲಗೆ ವಿಭಾಗ ಹಗ್ಗದ ವಿಭಾಗದಲ್ಲಿ ಹಿರಿಯ ಮತ್ತು ಕಿರಿಯ ನೇಗಿಲ ವಿಭಾಗದಲ್ಲಿ ಹಿರಿಯ ಮತ್ತು ಕಿರಿಯ ಅಡ್ಡ ಹಲಗೆ ವಿಭಾಗವಿದೆ.