ಇದೇ ಬರುವ ದಿನಾಂಕ 13 ನವೆಂಬರ್ 21 ರ ಶನಿವಾರ ಮಂಗಳೂರಿನ ಕೆನರಾ ಕಾಲೇಜು ಸಭಾಂಗಣದಲ್ಲಿ ಸಾಯಂಕಾಲ 3-30 ರಿಂದ ರಾಜ್ಯೋತ್ಸವ ಕವಿಗೋಷ್ಠಿ ಸಮಾರಂಭವು ನಡೆಯಲಿದೆ.

ಮಂಗಳೂರು ರೇಡಿಯೋ ಕೇಳುಗರ ಸಂಘ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಘಟಕವು ಜಂಟಿಯಾಗಿ ನಡೆಸುವ ಈ ಸಮಾರಂಭದಲ್ಲಿ ಆಯುರ್ವೇದ ಮತ್ತು ಆರೋಗ್ಯ ಎಂಬ ವಿಚಾರವಾಗಿ ಡಾ ಸುರೇಶ ನೆಗಳಗುಳಿ ಇವರ ಉಪಾನ್ಯಾಸ ವು ನಡೆಯಲಿದೆ.

ಜನಪ್ರಿಯ ಲೆಕ್ಕ ಪತ್ರ ಪರಿಶೋಧಕರಾದ ಮಂಗಳೂರಿನ ಶ್ರೀ  ಎಸ್ ಎಸ್ ನಾಯಕ್ ಇವರ ಘನ‌ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭವನ್ನು  ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಬಿ ಯೋಗೀಶ್ ಆಚಾರ್ಯ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಘಟನಾ ಕಾರ್ಯದರ್ಶಿ ಶ್ರೀ ವಾಸು ಸಮುದ್ರವಳ್ಳಿ ಯವರು ಭಾಗವಹಿಸುವರು

ಕೇಂದ್ರ ಸಾಹಿತ್ಯವೇದಿಕೆಯ ದಕ್ಷಿಣ ಕನ್ನಡ ಘಟಕದ ಔಪಚಾರಿಕ ಉದ್ಘಾಟನೆಯಾದ ನಂತರ ಗುಣಾಜೆ ರಾಮಚಂದ್ರ ಭಟ್,ಸತ್ಯವತಿ ಕೊಳಚಪ್ಪು,ವಿಘ್ನೇಶ್ ಭಿಡೆ,ವಾಸು ಸಮುದ್ರವಳ್ಳಿ,ಡಾ ವಾಣಿಶ್ರೀ ಕಾಸರಗೋಡು, ಹ.ಸು ಒಡ್ಡಂಬೆಟ್ಟು, ಮಂಜುಶ್ರೀ ನಲ್ಕ,ಮಾನಸ ಪ್ರವೀಣ ಭಟ್ ಮೂಡುಬಿದಿರೆ,ರಶ್ಮಿ ಸನಿಲ್,ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯಾ ಗೋಪಾಲ್,ಶಾಂತಾ ಪುತ್ತೂರು, ನವೀನ್ ಕುಲಾಲ್ ಚಿಪ್ಪಾರು,ಜಯಾನಂದ ಪೆರಾಜೆ,ರೇಮಂಡ್ ಡಿ ಕೂನ,ಡಾ ಸುರೇಶ ನೆಗಳಗುಳಿ, ಪರಿಮಳ ಮಹೇಶ,ಮನ್ಸೂರ್ ಮುಲ್ಕಿ,ದೀಪಾ ಪಾವಂಜೆ,ಆಕ್ೃತಿ ಎಸ್ ಭಟ್,ಚಂದನಾ ಕಾರ್ತಟ್ಟು,ಚಿತ್ರಶ್ರೀ,ಎಂಪಿ ಬಶೀರ್ ಅಹ್ಮದ್,ನಾರಾಯಣ ಕುಂಬ್ರ,ಹಾಗೂ ವೇದಿಕೆಯ ಸಂಚಾಲಕ ರಾಮಕೃಷ್ಣ ಶಿರೂರು ಕವನ ವಾಚನ ಮಾಡುವರು.

ರೇಡಿಯೋ ಕೇಳುಗರ ಸಂಘದ ಅಧ್ಯಕ್ಷ ಶ್ರೀ ರಾಮ ರಾವದ ಯು,ಕಾರ್ಯದರ್ಶಿಶ್ರೀಮತಿ  ಸಾವಿತ್ರಿ ರಾಮ ರಾವ್,ವೇಧಿಕೆಯ ಜಿಲ್ಲಾಧ್ಯಕ್ಷ ಡಾ ಸುರೇಶ ನೆಗಳಗುಳಿ ಮತ್ತು ಕಾರ್ಯದರ್ಶಿ ಚಂದನಾ ಕಾರ್ತಟ್ಟುಮತ್ತು ನಿರೂಪಕಿ‌ ಯಶಸ್ವಿನಿಯವರು ಉಪಸ್ಥಿತರಿರುವರು.

ಇದೇ ಸಂದರ್ಭ ಕೊಡುಗೈ ದಾನಿ ಹಾಗೂ ಸಮಾಜ ಸೇವಕರೂ ಆಗಿ ಬಹಳ ಖ್ಯಾತರಾದ ಶ್ರೀ ಎಸ್ ಎಸ್ ನಾಯಕರನ್ನು ಅಭಿನಂದಿಸಲಾಗುವುದು ಎಂದು ವೇದಿಕೆಯ ಅಧ್ಯಕ್ಷರಾದ ಡಾ ಸುರೇಶ ನೆಗಳಗುಳಿ ತಿಳಿಸಿದ್ದಾರೆ.