ಉಜಿರೆ: ರುಡ್‍ಸೆಟ್ ಸಂಸ್ಥೆಯ 2022-23 ರ ಸಾಲಿನ ವಾರ್ಷಿಕ ವರದಿಯನ್ನು ರುಡ್‍ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪದ್ಮವಿಭೂಷಣ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 2022-23 ರ ಸಾಲಿನಲ್ಲಿ 28 ವಿವಿಧ ತರಬೇತಿ ತಂಡಗಳಲ್ಲಿ 751 ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಿ ಶೇ.72 ಶಿಭಿರಾರ್ಥಿಗಳನ್ನು ಸ್ವ ಉದ್ಯೋಗಿಗಳನ್ನಾಗಿ ಹೊರತರುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ.
ಕಳೆದ ಒಂದು ವರ್ಷದಲ್ಲಿ ಸಂಸ್ಥೆಗೆ ಭೇಟಿ ನೀಡಿದ ವಿವಿಧ ವಿದೇಶಿ ತಂಡಗಳು ಹಾಗೂ ಇತರ ಇಲಾಖಾ ಭೇಟಿಗಳ ಬಗೆಗಿನ ಮಾಹಿತಿಯ ಬಗ್ಗೆ ಚರ್ಚಿಸಿದರು. ಸಂಸ್ಥೆಯು 2022-23 ರಲ್ಲಿ ಕರ್ನಾಟಕದ ವಿವಿಧ ರುಡ್ಸೆಟ್ ಶಾಖೆಗಳಲ್ಲಿ ಈಗಾಗಲೆ ಬ್ಯೂಟಿಪಾರ್ಲರ್ ಕ್ಷೇತ್ರದಲ್ಲಿ ತರಬೇತಿ ಪಡೆದು ಸ್ವಂತ ಉದ್ದಿಮೆ ನಡೆಸುತ್ತಿರುವ ಉದ್ಯಮಿಗಳಿಗೆ ರಾಜ್ಯ ಮಟ್ಟದ 3 ದಿನಗಳ ವಿಶೇಷ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿರುವುದು ಮತ್ತು ಅದರ ಯಶಸ್ಸನ್ನು ಕುರಿತು ಸಂತೋಷವನ್ನು ವ್ಯಕ್ತ ಪಡಿಸಿದರು.
ಪ್ರಸಕ್ತ ಸಾಲಿನಲ್ಲಿ ವಿವಿಧ ತರಬೇತಿ ಕಾರ್ಯಕ್ರಮಗಳ ಜೊತೆಗೆ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸಲಹೆಗಳನ್ನು ನೀಡಿ ಶುಭ ಹಾರೈಸಿದರು.