ಮಂಗಳೂರು: ರಿಕ್ಷಾ ಚಾಲಕರು ತಮ್ಮ ಗೌರವವನ್ನು ಕಾಪಾಡಿಕೊಂಡು ಬರುವುದರ ಜೊತೆಗೆ ಸೇವಾ ದೃಷ್ಟಿಯಲ್ಲಿ ರಿಕ್ಷಾ ಚಾಲನೆ ಮಾಡುವ ಅವಶ್ಯಕತೆ ಇದೆ. ಇನ್ನೊಂದು ಅರ್ಥದಲ್ಲಿ ತಾವು ಕೆಲಸ ಮಾಡುವ ಈ ಸಮಾಜದಲ್ಲಿ ಗೌರವವನ್ನು ಸಂಪಾದನೆ ಮಾಡುವುವುದರ ಜೊತೆಗೆ ತಮ್ಮ ಕುಟುಂಬದ ನಿರ್ವಹಣೆಯೂ ಉತ್ತಮವಾಗಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ರಿಕ್ಷಾ ಚಾಲಕರ ಕುಟುಂಬದ ಬಹುತೇಕ ಸದಸ್ಯರು ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಉತ್ತಮ ವಿದ್ಯಭ್ಯಾಸಗಳನ್ನು ಪಡೆಯುತ್ತಿದ್ದು ಅವರ ವಿದ್ಯಾಭ್ಯಾಸವನ್ನು ಪಡೆಯಲು ರಿಕ್ಷಾಚಾಲನೆ ಮಾಡಿ ತಮ್ಮ ಕುಟುಂಬವನ್ನು ಸಾಕುತ್ತಿರುವುದು ಬಹಳ ಶ್ಲಾಘನೀಯ. ರಿಕ್ಷಾ ಚಾಲಕರು ತಮ್ಮ ವೃತ್ತಿಯನ್ನು ಬಹಳ ಗೌರವವಾಗಿ ಕಾಣುವುದರ ಜೊತೆಗೆ ಸರಕಾರದ ನಿಯಮವನ್ನು ಪಾಲನೆ ಮಾಡುವುದರೊಂದಿಗೆ ಅನೇಕ ಸರಕಾರದಿಂದ ನೀಡುವ ಸವಲತ್ತುಗಳನ್ನು ಪಡೆಯಲು ಮುಂದೆಬರಬೇಕು ಎಂದು ಐವನ್ ಡಿʼಸೋಜಾ ಕರೆ ನೀಡಿದರು.
ಅವರು 29ನೇ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಸುಮಾರು 29 ವರ್ಷಗಳ ಕಾಲ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾಗಿ ನನಗೆ ಅತೀವ ಸಂತೋಷ ತಂದಿದೆ ಎಂದು ಹೇಳುವುದರ ಜೊತೆಗೆ ಅನೇಕ ರಿಕ್ಷಾ ನಿಲ್ದಾಣಗಳಿಗೆ ಮೇಲ್ಛಾವಣಿ ಹಾಕುವ ಮೂಲಕ ರಿಕ್ಷಾ ಚಾಲಕರು ಸಮಾಜದಲ್ಲಿ ಅವರಿಗೂ ಒಂದು ಪಾಲು ತೆರಿಗೆ ಹಣ ಬರಬೇಕೆಂದು ಎಂದು ಪ್ರತಿಪಾದನೆ ಮಾಡುವುದರ ಮೂಲಕ ಸರಕಾರದಿಂದ ರಿಕ್ಷಾ ಸ್ಟ್ಯಾಂಡಿಗೆ ಮೇಲ್ಛಾವಣಿ ಘಟಕಕ್ಕೆ ಸರಕಾರದಿಂದ ಹಣ ಬಿಡುಗಡೆ ಮಾಡಿಸಲು ವಿಧಾನ ಪರಿಷತ್ನಲ್ಲಿ ಹೋರಾಟ ನಡೆಸಿದ ಫಲವಾಗಿ ಸಾಧ್ಯವಾಯ್ತು. ಇಂದು ರಾಜ್ಯದ ಏಲ್ಲಾ ರಿಕ್ಷಾ ಮೇಲ್ಛಾವಣಿ ಘಟಕ ಹಾಕುವಂತೆ ಮಾಡಲು ನನ್ನ ಹೋರಾಟದ ಫಲವಾಗಿ ಆಗಿದೆ ಹಾಗೂ ಇದು ನನಗೆ ಅತೀವ ಸಂತೋಷ ತಂದಿದೆ ಎಂದು ತಿಳಿಸಿದರು.
ರಿಕ್ಷಾ ಚಾಲಕರಿಗೆ ಸಿಗಬೇಕಿದ್ದ ಸವಲತ್ತುಗಳಿಗೆ ನೋಂದಾವಣಿ ಕಾರ್ಯಕ್ರಮವನ್ನು ಇತ್ತೀಚೆಗೆ ತಮ್ಮ ಕಛೇರಿಯಲ್ಲಿ ನಡೆಸಿದ್ದು, ಕಾರ್ಮಿಕರು ತಮ್ಮ ಹಿತದೃಷ್ಟಿಯಿಂದ ತಮ್ಮ ಕುಟುಂಬದ ಕಾರ್ಯನಿರ್ವಹಣೆ ಮಾಡುವುದು ಅವಶ್ಯಕತೆ ಇದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮ್ಯಾಕೋ ಸೊಸೈಟಿಯ ಅಧ್ಯಕ್ಷರಾದ ಸಿರಿಲ್ ಡಿʼಸೋಜಾ ಭಾಗವಹಿಸಿದ್ದರು. ಐವನ್ ಡಿʼಸೋಜಾರವರು 3೦ನೇ ವರ್ಷದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು ರಿಕ್ಷಾ ಚಾಲಕ ಸಂಘದ ಎಲ್ಲಾ ಪಾಧಿಕಾರಿಗಳು ಉಪಸ್ಥಿತರಿದ್ದರು.