ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮಂಗಳೂರು ಮೂಡುಶೆಡ್ಡೆಯ ಬರಡು ಪ್ರದೇಶದಲ್ಲಿ ಹಿಂದೆ ಬಹಳ ಚಿಕ್ಕ ಕಟ್ಟಡವು ನಿರ್ಮಿಸಲಾಗಿತ್ತು. ಇದೀಗ ಅದರ ಹತ್ತಿರದ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಸುಂದರವಾದ, ಸುಸಜ್ಜಿತ ಉತ್ತಮ ರೀತಿಯ ಐದು ನೂರು ಜನರಿಂದ ಒಂದು ಸಾವಿರ ಜನ ಸೇರಿ ವಿವಿಧ ಕಾರ್ಯಕ್ರಮ ಮಾಡಲು ಸಾಧ್ಯವಿರುವ ಆರು ವಿವಿಧ ಭಾವನೆಗಳನ್ನು ನಿರ್ಮಿಸಲಾಗುತ್ತಿದೆ.
ದ.ಕ.ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಗಳ ನೇತಾರತ್ವ ಪಡೆದ ತರುವಾಯ ಡಾ.ಎಂ.ಮೋಹನ ಆಳ್ವ ಬಹಳಷ್ಟು ಮೆಚ್ಚುವಂಥ ರೀತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಅವರ ವಿಶಿಷ್ಟ ಯೋಜನೆ ಅಲ್ಲಿಯೂ ಕಾರ್ಯರೂಪಕ್ಕೆ ಬರುತ್ತಿರುವುದು ಸಂಸ್ಥೆಯ ಏಳಿಗೆಗೆ ರಹದಾರಿಯಾಗಿದೆ.