ಮೂಡುಬಿದಿರೆ: ಕೇರಳದ ತ್ರಿಶೂರ್ ನಲ್ಲಿ ಜರುಗಿದ ದಕ್ಸಿಣ ಭಾರತದ ಅಂತರ್ ರಾಜ್ಯ  ಅಶ್ಮಿತಾ ಖೇಲೋ ಇಂಡಿಯಾ ಮಹಿಳಾ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ತಂಡವು ಸಮಗ್ರ ಚಾಂಪಿಯನ್ಸ್ ಪಟ್ಟವನ್ನು ಪಡೆದುಕೊಂಡಿತು. ಆ ಮೂಲಕ ಕರ್ನಾಟಕ ರಾಜ್ಯ ತಂಡವನ್ನು ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಪ್ರತಿನಿಧಿಸಲಿದೆ.  ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು 2 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ ಸೇರಿದಂತೆ ಒಟ್ಟು 7 ಪದಕಗಳನ್ನು ಪಡೆಯುದರೊಂದಿಗೆ ದಕ್ಷಿಣ ಭಾರತ ಮಟ್ಟದ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.  

ಚಿನ್ನದ ಪದಕ ಗಳಿಸಿದವರು: ಶ್ರಾವ್ಯ-(48 ಕೆಜಿ), ಪಾವನಿ-(77 ಕೆಜಿ ಪ್ಲಸ್) , ಬೆಳ್ಳಿಯ ಪದಕ ಗಳಿಸಿದವರು:  ದೀಪಿಕಾ-(53 ಕೆಜಿ), ಕಾಂಚನ-(58 ಕೆಜಿ), ಕಂಚಿನ ಪದಕ ಗಳಿಸಿದವರು: ಪಲ್ಲವಿ-(44 ಕೆಜಿ), ಹಂಸವೇಣಿ-(63 ಕೆಜಿ), ಮಾನಸ-(77 ಕೆಜಿ)

ಕ್ರೀಡಾಪಟುಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.