ಸಾವಿಲ್ಲದ ಸೋಮವಾರ ಕಂಡು‌ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮಂಗಳವಾರ ಕೊರೋನಾ ನಾಲ್ವರನ್ನು ಬಲಿ‌ ತೆಗೆದುಕೊಂಡುದನ್ನು ಕಂಡು ನಡುಗಿದ್ದಾರೆ.

ಕಳೆದ 24 ಗಂಟೆಗಳ 4 ಸಾವಿನೊಂದಿಗೆ ದಕ್ಷಿಣ ಕನ್ನಡದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆಯು 764 ಆಯಿತು.

ನಿನ್ನೆ ಹೊಸದಾಗಿ 935 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ದ. ಕ. ಜಿಲ್ಲೆಯ ಒಟ್ಟು ಕೊರೋನಾ ಬಾಧಿತರ ಸಂಖ್ಯೆಯು 48,281 ಆಯಿತು.