ಪ್ರಕೃತಿಯ ವಿರುದ್ಧ ಅಹಂಕಾರ ಮೆರೆದಿದ್ದ ಜನರನ್ನು ಹಣಿಯುವಂತೆ ಕೋವಿಡ್ ಜಗತ್ತನ್ನು ನಡುಗಿಸುತ್ತ ಮುನ್ನಡೆದಿದೆ.
ಮಂಗಳವಾರ ಜಾಗತಿಕವಾಗಿ ಕೋವಿಡ್‌ನಿಂದ 11,039 ಮರಣ ಸಂಭವಿಸಿದೆ. ಕೊರೋನಾಘಾತಕ್ಕೆ ಬಲಿಯಾದ ಒಟ್ಟು ಸಂಖ್ಯೆ 32,48,614 ತಲುಪಿ ಮುಂದೊತ್ತಿದೆ.
ಅದೇ 24 ಗಂಟೆಗಳ ಅವಧಿಯಲ್ಲಿ 6,91,678 ಕೊರೋನಾ ಸೋಂಕಿತರು ಹೊಸದಾಗಿ ಈ ಭೂಮಿ ಮೇಲೆ ಕಂಡು ಬಂದಿದ್ದಾರೆ. ಅದರೊಂದಿಗೆ ಒಟ್ಟು ಕೊರೋನಾಕ್ಕೀಡಾದವರ ಸಂಖ್ಯೆಯು 15,49,68,635 ಆಗಿದೆ.