ಭಾರತದಲ್ಲಿನ ನೋವೆಲ್ ಕೋವಿಡ್19 ಸಾಂಕ್ರಾಮಿಕ ಹರಡುವಿಕೆ ಮುಂದುವರಿದಿದ್ದು ಆಳುವವರ ಇಚ್ಛಾಶಕ್ತಿಯ ಕೊರತೆ ಎಲ್ಲೆಡೆ ಎದ್ದು ಕಂಡಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೊರೋನಾ ಸೋಂಕು ಮೊತ್ತಕ್ಕೆ 3,82,691 ಜನ ಸೇರ್ಪಡೆಯಾದರು. ಒಟ್ಟು ಮೊತ್ತ ಬಾಧಿತರ ಸಂಖ್ಯೆಯು 2,06,52,234 ಆಯಿತು.
ಮಂಗಳವಾರ ಇದೇ ಅವಧಿಯಲ್ಲಿ ಭಾರತದಲ್ಲಿ 3,782 ಜನರು ಕೊರೋನಾದಿಂದ ಅಸು ನೀಗಿದ್ದಾರೆ. ಭಾರತದ ಕೊರೋನಾ ಸಾವಿನ ಒಟ್ಟು ಸಂಖ್ಯೆಯು 2,26,169 ಆಗಿದೆ.