ಮಂಗಳೂರು: ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾ ತಂಡವು ಇತ್ತೀಚೆಗೆ ನಡೆದ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.


ಎಸ್.ಜೆ.ಇ.ಸಿ ಪುರುಷರ ಬ್ಯಾಸ್ಕೆಟ್‌ಬಾಲ್ ತಂಡವು 2023 ರ ಸೆಪ್ಟೆಂಬರ್ 21 ರಿಂದ 24 ರವರೆಗೆ ಮಂಗಳಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 1 ನೇ ಶ್ರೀ ಆರ್ ಎಲ್ ಜೈಪುರಿಯಾ ಸ್ಮಾರಕ ಕಪ್ - 2023 ರ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಸ್ಥಾನಗಳಿಸಿದೆ. ಈ ಅಗಾಧ ಸಾಧನೆಗಾಗಿ ಎಸ್.ಜೆ.ಇ.ಸಿ ಆಡಳಿತ ಮಂಡಳಿ ಇಡೀ ತಂಡವನ್ನು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಅಭಿನಂದಿಸುತ್ತದೆ.