ಕಾರ್ಯಕ್ರಮವನ್ನು ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಹರ್ಷೇಂದ್ರ ಕುಮಾರ್ ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಅನಂತರ ಮಾತನಾಡಿದ ಅವರು ನಾನು ಶ್ರೀನಾಥ್‌ರಿಗೆ ಏಕೆ ಪ್ರಯತ್ನಿಸಬಾರದು ಎಂದಿದ್ದೆ. ಅವರು ಸಾಧಿಸಿಬಿಟ್ಟಿದ್ದಾರೆ. ಕನ್ನಡ ಹುಮ್ಮಸ್ಸು ಮಾತಿನಷ್ಟು ಕೃತಿಯಲ್ಲಿ ಇಲ್ಲ. ಅದನ್ನೆಲ್ಲ ಶ್ರೀನಾಥ್‌ರಂಥವರು ಸರಿಪಡಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಒಂದಷ್ಟು ಸೇವೆ ಮಾಡಿದ್ದೇವೆ. ಜಿಲ್ಲಾ ಪರಿಷತ್ ಸಹ ಪ್ರಜ್ವಲಿಸಲಿ ಎಂದು ಅವರು ಹೇಳಿದರು.
ನಡುವೆ ಆಡಳಿತಾಧಿಕಾರಿ ಆಗಿದ್ದ ರಾಜೇಶ್ ಜಿ. ಅವರು ಕನ್ನಡ ಬಾವುಟವನ್ನು ಎಂ. ಪಿ. ಶ್ರೀನಾಥ್ ಅವರಿಗೆ ಕೊಟ್ಟು ಅಧಿಕಾರ ವಹಿಸಿಕೊಟ್ಟರು.
ಕನ್ನಡ ಸಂಸ್ಕೃತಿ ಇಲಾಖೆಯ ರಾಜೇಶ್ ಜಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕದ ಅತಿ ಭಾಷಾ ವೈವಿಧ್ಯತೆಯ ಜಿಲ್ಲೆ ದಕ್ಷಿಣ ಕನ್ನಡ. ಹಾಗೆಯೇ ಹಲವಾರು ಭಾಷೆಗಳಿದ್ದರೂ ಇಲ್ಲಿ ಕನ್ನಡಾಭಿಮಾನಕ್ಕೆ ಕೊರತೆ ಇಲ್ಲ ಎಂದು ಅವರು ಹೇಳಿದರು.
ಕೊನೆಯದಾಗಿ ಶ್ರೀನಾಥ್ ಅವರು ಎಲ್ಲರನ್ನೂ ವಂದಿಸಿದರು.