ಸುರುಕ್ಕ ಸುರಿದು ಮೈ ಹರಿಯುವ ಮುಳ್ಳುಗಳ ಇದನ್ನು ಸುರಿ ಮುಳ್ಳು, ಚೂರಿ ಮುಳ್ಳು ಹಣ್ಣುಗಳು ಎಂದು ಕರೆಯಲಾಗುತ್ತದೆ. ಚೂರಿಮುಳ್ಳ ಪರ್‌ಂದ್ ಎಂಬ ಈ ಕಾಡು ಹಣ್ಣಿನಲ್ಲಿ ತಿನ್ನುವ ಅಂಶ ಕಡಿಮೆಯಾದರೂ ರುಚಿಗೇನೂ ಕೊರತೆಯಿಲ್ಲ. 

ಅದರ ಸಾಲು ಚೂರಿಯಂತಾ  ಮುಳ್ಳುಗಳಿಗೆ ಸವಾಲು ಹಾಕಿ ತಿನ್ನುತ್ತಿದ್ದವು; ಬಹು ಕಾಲದ ಬಳಿಕ ನಿನ್ನೆಯೂ ತಿಂದೆ.

ಕಾಯಿ ಹಸಿರು ಬಣ್ಣಕ್ಕಿದ್ದು ಹಣ್ಣಾದಾಗ ಕಡು ನೀಲಿ  ಕಪ್ಪಾಗುತ್ತದೆ. ಹಿಂದಿನಂತೆ ಕಾಡು ಹಣ್ಣುಗಳು ಈಗೆಲ್ಲ ಸಿಗುವುದಿಲ್ಲ. ಆದರೆ ನಿಸರ್ಗದತ್ತವಾದ ಇವು ನೇರ ಸಾವಯವ.

ಬಕ್ ತೋರ್ನ್ ಕುಟುಂಬದ ಇದರ ಸಸ್ಯ ಶಾಸ್ತ್ರೀಯ ಹೆಸರು ಜಿಜಿತ್ ಪಸ್. ಕನ್ನಡದಲ್ಲಿ ಚುರಿ (ಸುರಿ) ಮುಳ್ಳು, ಬರಿಗೆ, ಮಲಯಾಳಂನಲ್ಲಿ ವಂತುತಲಿ, ಕೊಂಕಣಿ ಮರಾಠಿಗಳಲ್ಲಿ‌ ಬುರ್ಗಿ ಮೊದಲಾದ ಹೆಸರು ಇದಕ್ಕಿದೆ.

ಇಂಗ್ಲಿಷ್‌ನಲ್ಲಿ ಜಾಕೆಲ್ ಜುಜುಬೆ, ವೈಲ್ಡ್ ಜಜುಬೆ ಇತ್ಯಾದಿ ಜುಜುಬೆ ನಾಮಗಳಿವೆ. ಚೀನಾ ಭಾರತ ಆಸ್ಟ್ರೇಲಿಯಾ ತನಕ‌ ಇದರ ಹಬ್ಬು ವ್ಯಾಪ್ತಿ ಇದೆ. ಕೋಟಿ ಚೆನ್ನಯ ಪಾಡ್ದನದಲ್ಲಿ ಬುದ್ಯಂತ ಮಲ್ಲಯನು ಚೂರಿ ಮುಳ್ಳಿನಿಂದ ಚೆನ್ನಯನ ಮುಖಕ್ಕೆ ಬಾರಿಸುವೆ ಎಂದು ಹೇಳುವ ಸನ್ನಿವೇಶವಿದೆ.

Article By

- Perooru Jaru