ವಿಷಯ ವಿಸ್ಮಯ ಎಂಬಂತೆ ಮನೆಯ ಮೂಲೆ ಮೂಲೆಯಲ್ಲಿ ಜೇಡನ ಬಲೆಯನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ ಹಾಗೆ ಕೆಲವೊಮ್ಮೆ ಗೋಡೆಗಳಲ್ಲಿ ಹಲ್ಲಿಗಳು ರಾತ್ರಿ ಕೀಟಗಳಿಗಾಗಿ ಆಹಾರವನ್ನು ಅರಸುತ್ತ ಇರುತ್ತವೆ. ಆದರೆ ಅಪರೂಪದ ದೃಶ್ಯ ಒಂದು ದ. ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಡಿಪು ಸುಬ್ರಹ್ಮಣ್ಯ ಭಟ್ ರವರ ಮನೆಯಲ್ಲಿ ಹಲ್ಲಿ ಜೇಡನ ಆಹಾರವಾಗುತ್ತಿರುವುದನ್ನು ಕಾಣಬಹುದು ಸಣ್ಣ ಸಣ್ಣ ಕ್ರಿಮಿ ಕೀಟಗಳು ಆಹಾರವಾಗುತ್ತಿದ್ದು

ಇತ್ತೀಚೆಗೆ ಆ ಸರಣಿ ಆಹಾರ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ ಅದನ್ನು ಯಾರು ನಿಲ್ಲಿಸುವಂತಿಲ್ಲ ಕಪ್ಪೆ ,ಚೇಳು ಹಾವನ್ನು ನುಂಗುವಂತದ್ದು ಹೀಗೆ ಪ್ರಕೃತಿಯಲ್ಲಿ ಆಗುವ ಪರಿವರ್ತನೆ ಮಾತ್ರವಲ್ಲದೆ ಜೀವನ ಶೈಲಿಯಲ್ಲೂ ನಾನಾ ರೀತಿಯ ಬದಲಾವಣೆಗಳು ಆಗುತ್ತಿರುತ್ತದೆ. ಕೋಡಗನ ಕೋಳಿನುಂಗಿತ್ತಾ...ನೋಡವ್ವ ತಂಗಿ ಜಾನಪದ ಹಾಡಿದ್ದೇನು ಇದೀಗ ದೊಡ್ಡದು ಸಣ್ಣದರ ಪಾಲಾಗುತ್ತಿರುವುದು ಸೋಜಿಗವೇ ಸರಿ.

ಬರಹ :ಕುಮಾರ್ ಪೆರ್ನಾಜೆ