ಮಂಗಳೂರು, ಫೆ 28:  ರಾಜ್ಯದ ಕೆಪಿಸಿಸಿ ಉಸ್ತುವಾರಿ ಸುರ್ಜೇವಾಲ ಅವರು ಮಾರ್ಚ್ 2ರಂದು ಸುರತ್ಕಲ್ ಮತ್ತು ಗುರುಪುರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು ಎಂದು ಮಾಜೀ ಶಾಸಕ ಮೊಯ್ದಿನ್ ಬಾವಾ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

ಕಾರ್ಯಕರ್ತರೊಡನೆ ಸ್ಪಂದನಾ ಕಾರ್ಯಕ್ರಮ ಈಗಾಗಲೇ ‌ಎಲ್ಲೆಡೆ ನಡೆಯುತ್ತಿದೆ. ಅದರ ಅಂಗವಾಗಿ ಗುರುಪುರದಲ್ಲಿ ಹಾಲ್‌ಲಿ ಬೆಳಿಗ್ಗೆ ಹಾಗೂ ಸಂಜೆ ಸುರತ್ಕಲ್ ಬಳಿ ಕೃಷ್ಣಾಪುರದಲ್ಲಿ ಸಾರ್ವಜನಿಕ ಸಭೆ ನಡೆಯುತ್ತದೆ ಎಂದು ಬಾವಾ ತಿಳಿಸಿದರು.

ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಬಿ. ಕೆ. ಹರಿಪ್ರಸಾದ್, ಮಧು ಬಂಗಾರಪ್ಪ ಮೊದಲಾದವರಲ್ಲದೆ ಸ್ಥಳೀಯವಾಗಿ ಮಿಥುನ್‌ ರೈ, ರಮಾನಾಥ ರೈ, ಅಭಯಚಂದ್ರ ಜೈನ್ ಮೊದಲಾದವರು ಭಾಗವಹಿಸುವರು ಎಂದು ಅವರು ಹೇಳಿದರು.

ಸುರತ್ಕಲ್ ಮಾರುಕಟ್ಟೆಗೆ 60 ಕೋಟಿ ರೂಪಾಯಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗಲೇ ಬಹುತೇಕ ಬಂದಿತ್ತು. ಅದನ್ನು ಬಿಜೆಪಿಯವರು ಖರ್ಚು ಮಾಡಿದ್ದಾರೆ. ಆದರೆ ಕೆಲಸ ಅರೆಬರೆ ಆಗಿದೆ. ಮಹಾನಗರ ಪಾಲಿಕೆ ಕೆಲಸದಲ್ಲೂ ಅದೇ ಕತೆ ಎಂದು ಬಾವಾ ತಿಳಿಸಿದರು.

ಮುಂದಿನ ನಮ್ಮ ಸರಕಾರವು ಏನೇನು ಜನರಿಗೆ ಮಾಡುತ್ತದೋ ಅದರ ಪತ್ರ ಸಿದ್ಧವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕವಿತಾ ಸನಿಲ್, ಶಶಿಧರ ಹೆಗ್ಡೆ, ಪುರುಷೋತ್ತಮ, ಅಲ್ತಾಫ್, ಅನಿಲ್ ಕುಮಾರ್, ಸುರೇಂದ್ರ ಕಂಬಳಿ ಮೊದಲಾದವರು ಉಪಸ್ಥಿತರಿದ್ದರು. ಸದ್ಯ ಸರ್ವೆ ನಡೆಯುತ್ತಿದೆ, ಅಭ್ಯರ್ಥಿ ಅಂತಿಮವಾಗಿಲ್ಲ, ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲ ಒಂದಾಗಿ ಕಾಂಗ್ರೆಸ್ಸನ್ನು ಗೆಲ್ಲಿಸುವುದಾಗಿ ಅವರು ಪ್ರಶ್ನೆಗೆ ಉತ್ತರಿಸಿದರು.