ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ  ಶಾಲೆ ಕರಿಮಣೇಲು ಇದರ ಶಿಕ್ಷಕ ರಕ್ಷಕ ಸಂಘದ ಸಭೆಯು ಜೂಲೈ 16 ರಂದು ಜರಗಿತು. ಶಾಲಾ ಸಂಚಾಲಕರಾದ ವಂದನೀಯ ಎಡ್ವಿನ್ ಸಂತೋಷ್ ಮೋನಿಸ್ ರವರು ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿ ನಿವೃತ್ತ ಶಿಕ್ಷಕ ಎಲ್ ಜೆ ಫೆರ್ನಾಂಡಿಸ್ ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಪಾತ್ರದ ಬಗ್ಗೆ ಮಾತಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ ವಂದನೀಯ ಎಡ್ವಿನ್ ಸಂತೋಷ್ ಮೋನಿಸ್ ರವರು ಸಹಕಾರಕ್ಕಾಗಿ ಹೆತ್ತವರನ್ನು ಅಭಿನಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ಮಾರ್ಸೆಲಿನ್ ಪಿರೇರ ಸ್ವಾಗತಿಸಿದರು. ಸುಮಲತಾ ವರದಿ ಓದಿದರು. ಶಿಕ್ಷಕಿ ಮೀನಾ ಮೋನಿಸ್ ನಿರ್ವಹಿಸಿದರು. ಸುಪ್ರೀತ ವಂದಿಸಿದರು. ದಿನೇಶ್ ಗೌಡ,ಪಂಚಾಯತ್ ಸದಸ್ಯ ಜಿನ್ನು ಮತ್ತು ಗಾಯತ್ರಿ ಉಪಸ್ಥಿತರಿದ್ದರು.