ಮಂಗಳೂರು, ಸೆ.15: ಮೈಸೂರಿನಲ್ಲಿ ಪ್ರಾಚೀನ ದೇವಾಲಯವನ್ನು ಕೆಡವಿ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಹಿನ್ನೆಲೆಯಲ್ಲಿ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ರಾಜಿ ನಾಮೆ ನೀಡಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯ ಲ್ಲಿಂದು ಆಗ್ರಹಿಸಿದ್ದಾರೆ.

ಬಿಜೆಪಿ ನೇತೃತ್ವದ ಸರಕಾರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಂಜನಗೂಡಿನ ದೇವಸ್ಥಾನ ಒಡೆದು ಹಾಕಿರುವುದಾಗಿ ಹೇಳಿಕೆ ನೀಡಿದೆ.ಆದರೆ ಇದೇ ಆದೇಶ 2009 ರಲ್ಲೂ ಇತ್ತು.ಆದರೆ ಕಾಂಗ್ರೆಸ್ ಸರಕಾರ ಜನರ ಭಾವನೆಗೆ ಧಕ್ಕೆ ಯಾಗುವ ಯಾವ ಕೆಲಸವ ನ್ನು ಮಾಡಿಲ್ಲ‌ ಏಕಾಏಕಿ ಧಾರ್ಮಿಕ ಕೇಂದ್ರ ಗಳನ್ನು ಒಡೆಯುವ ಕೆಲಸ  ಮಾಡಿಲ್ಲ . ಧಾರ್ಮಿಕ ಕೇಂದ್ರಗಳ ಜೊತೆ ಜನ ಸಾಮಾ ನ್ಯರ  ನಂಬಿಕೆಗಳು,ಭಕ್ತಿ ಆಚರಣೆಗಳು ಸೇರಿಕೊಂಡಿವೆ ಈ ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ಬಜೆಪಿ ವಿಫಲವಾಗಿದೆ. ಬಿಜೆಪಿ ನೇತೃತ್ವದ ಸರಕಾರಕ್ಕೆ ಈ ವಿಷಯ ದಲ್ಲಿ ಜನರನ್ನು ಏಕೆ ವಿಶ್ವಾಸ ಕ್ಕೆ ತೆಗೆದು ಕೊಂಡಿಲ್ಲ.ಒಂದು ವೇಳೆ ಅಕ್ರಮವಾಗಿ ಕಟ್ಟಿದ್ದ ಧಾರ್ಮಿಕ ಕೇಂದ್ರಗಳನ್ನು ಸಕ್ರಮಗೊಳಿಸುವ ಬಗ್ಗೆ ಸಮಾಲೋಚನೆ ಅಥವಾ ಸೂಕ್ತ ಕ್ರಮ ಸರಕಾರ ಕೈ ಗುಳ್ಳ ಬೇಕಾಗಿತ್ತು ಎಂದು ಯು‌ಟಿ.ಖಾದರ್ ಆಗ್ರಹಿಸಿದ್ದಾರೆ.

ಬಿಜೆಪಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಾ ಬಂದಿದೆ.ಜನರ ಧಾಋಮಿಕ ಭಾವನೆಗಳನ್ನು ಕೆರಳಿಸಿ ಬಿಜೆಪಿ ಅಧಿಕಾರ ಪಡೆದಿದೆ. ಇದೀಗ ದೇವಾಲಯವನ್ನು ಕೆಡವಿ ಜನರ ಧಾರ್ಮಿಕ ಭಾವನೆಗಳಿಗೆ ಏಟು ನೀಡಿದೆ.ಈ ಬಗ್ಗೆ ನೈತಿಕ ಹೊಣೆಯನ್ನು ಬಿಜೆಪಿ ಹೊರಬೇಕಾಗಿದೆ ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್  ಕುಮಾರ್ ,ಮಾಜಿ ಸಚಿವ ಅಭಯ ಚಂದ್ರ ಜೈನ್ ,ಕಾಂಗ್ರೆಸ್ ಮುಖಂಡ ರಾದ ಶಶಿಧರ ಹೆಗ್ಡೆ,ಭಾಸ್ಕರ ಮೊಯ್ಲಿ, ಸಂತೋಷ್ ಕುಮಾರ್ ಶೆಟ್ಟಿ,ಸಲೀಂ,ಅಲ್ವಿನ್ ಮೊದಲಾದವರು ಉಪಸ್ಥಿತರಿದ್ದರು.