ವರುಷದಷ್ಟು ಹಿಂದೆ ಆಂಧ್ರದ ಜಗನ್ ಮೋಹನ್ ರೆಡ್ಡಿ ಅವರ ಸರಕಾರವು ಅಮರಾವತಿ ಅಲ್ಲದೆ, ಕಾರ್ಯಾಂಗದ ರಾಜಧಾನಿಯಾಗಿ ವಿಶಾಖಪಟ್ಟಣ, ನ್ಯಾಯಾಂಗದ ರಾಜಧಾನಿಯಾಗಿ ಕರ್ನೂಲು ಅಭಿವೃದ್ಧಿ ಪಡಿಸಲು ಕಾನೂನು ರೂಪಿಸಿತ್ತು.
ಇದರ ವಿರುದ್ಧ ಅಮರಾವತಿಯ ರೈತರು ಪ್ರತಿಭಟನೆ ನಡೆಸಿದ್ದರು. ಸಹಜವಾಗಿ ಪ್ರತಿಪಕ್ಷಗಳು ಆ ಚಳವಳಿ ಬೆಂಬಲಿಸಿದ್ದವು. ರೈತರ ವಿರೋಧ ಸರಿ ಹೋಗದು ಎಂದು ಕಂಡುಕೊಂಡ ಜಗನ್ ಸರಕಾರವು ಮೂರು ರಾಜಧಾನಿಗಳ ತೀರ್ಮಾನವನ್ನು ಕೈಬಿಟ್ಟಿದೆ.