ಆಂಧ್ರದಲ್ಲಿ 1882ರಲ್ಲಿ ಈ ರೀತಿಯ ಪ್ರವಾಹ ಬಂದಿತ್ತು. 140 ವರುಷಗಳ ಬಳಿಕ ಜನರನ್ನು ಕಂಗೆಡಿಸಿರುವ ಪ್ರವಾಹವಿದು ಎಂದು ದಾಖಲೆಗಳು ಹೇಳುತ್ತಿವೆ.
ಆಂಧ್ರದಲ್ಲಿ 2,000 ಜಾನುವಾರುಗಳು ನೀರು ಪಾಲಾಗಿವೆ. ಅಪಾರ ಆಸ್ತಿ ಹಾನಿಗೊಂಡಿದೆ. ಅಧಿಕೃತವಾಗಿ 60 ಜನ ನೆರೆಗೆ ಆಹಾರವಾಗಿದ್ದಾರೆ. ಪೆನ್ನಾ ನದಿ ಅನ್ನಮಯ್ಯ ನೀರಾವರಿ ಯೋಜನೆ ಊರು ನುಂಗಿದ್ದು, 35,000 ಜನರಿಗೆ ಶಿಬಿರಗಳಲ್ಲಿ ವಸತಿ ಕಲ್ಪಿಸಲಾಗಿದೆ. ಕಡಪ ಬಳಿಯ ಪಾಪಾಗ್ನಿ ನದಿಯ ಸೇತುವೆ ಮುರಿದಿದೆ. ಕೊಲ್ಕತ್ತಾ ಚೆನ್ನೈ ಸಹಿತ ಹಲವು ಹೆದ್ದಾರಿಗಳು ನಡು ಮುರಿದುಕೊಂಡಿವೆ.