ಬಿಜೆಪಿ ಪಕ್ಷವು ತನ್ನ ವಿರೋಧಿಗಳನ್ನು ಹತೋಟಿಗೆ ತರಲು ಮತ್ತು ವಿರೋಧ ಪಕ್ಷವನ್ನು ಹೆದರಿಸುವ ಮೂಲಕ ದೇಶದಲ್ಲಿ ಆಡಳಿತ ನಡೆಸಲು ಇ.ಡಿ.ಯನ್ನು ದುರ್ಬಳಕೆ ಮಾಡುತ್ತಿದೆ. ತಮ್ಮ ಮೀತಿಯನ್ನು ಮೀರಿ ಪದೇಪದೇ ಕೆಲಸ ಮಾಡುತ್ತಿದೆ ಎಂದು ಹೇಳಿದರೂ ಅದನ್ನು ದುರ್ಬಳಕೆ ಮಾಡಿಕೊಂಡು ಬರುತ್ತಾ ಇದ್ದ ಬಿಜೆಪಿ ಮತ್ತು ಬಿಜೆಪಿಯ ಸರಕಾರದ ಪ್ರಧಾನ ಮಂತ್ರಿ ಮೋದಿಯವರಿಗೆ ಮತ್ತು ಬಿಜೆಪಿ ಸರಕಾರಕ್ಕೆ ಸರಿಯಾದ ಛಡಿಯೇಟನ್ನು ನೀಡಿದ ಸುಪ್ರೀಂ ಕೋರ್ಟ್ ಇಂದಿನ ಸುಪ್ರೀಂಕೋರ್ಟ್ ನ ಹೇಳಿಕೆ ಹಾಗೂ ಇಂದಿನ ಸುಪ್ರೀಂ ಕೋರ್ಟ್ ತೆಗೆದುಕೊಂಡಂತಹ ತೀರ್ಮಾನ ದೇಶದ ಸಂವಿಂಧಾನ ಬದ್ದವಾದ ಸಂಸ್ಥೆಗಳನ್ನು ಬಿಜೆಪಿ ಹೇಗೆ ದುರ್ಬಳಕೆ ಮಾಡುತ್ತಿದೆ ಎಂಬುದು ಸಾಬೀತಾಗಿದೆ. ಬಿಜೆಪಿ ಸರಕಾರ ಮತ್ತು ಬಿಜೆಪಿ ಪಕ್ಷದ ನಾಯಕರುಗಳು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ನಾಯಕರುಗಳ ಮನೆಗೆ ಇಡಿಯನ್ನು ಬಳಕೆ ಮಾಡುವ ಮೂಲಕ ತಮ್ಮ ಮನೋಸ್ಥೆರ್ಯ ವನ್ನು ತಗ್ಗಿಸುವ ಮೂಲಕ ಮತ್ತು ಇಡಿಯನ್ನು ಉಪಯೋಗ ಮಾಡಿ ವಿರೋಧಪಕ್ಷಗಳನ್ನು ಪಕ್ಷಾಂತರಕ್ಕೆ ಪ್ರಚೋಧಿಸಿ, ದೇಶದಲ್ಲಿ ಇಂದು ಅರಾಜಕತೆಯನ್ನು ಉಂಟು ಮಾಡುವ ಮೂಲಕ ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡಿರುವುದ್ಕದಕೆ ಇದೊಂದು ಸ್ಪಷ್ಟವಾದ ಉದಾಹರಣೆ ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕರು ಕಾಂಗ್ರೆಸ್ ಕೆಪಿಸಿಸಿ ವಕ್ತಾರರಾದ ಐವನ್ ಡಿʼಸೋಜಾರವರು ಇಂದು ಹೇಳಿದ್ದಾರೆ.
ಬಿಜೆಪಿ ಪಕ್ಷವು ಮತ್ತು ಸರಕಾರವು ಎರಡೂ, ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ ಮತ್ತು ಬೇರೆ ಬೇರೆ ಪಕ್ಷದ ನಾಯಕರುಗಳ ಮೇಲೆ ಇಡಿಯನ್ನು ದುರ್ಬಳಕೆ ಮಾಡಿ ಅವರನ್ನು ಜೈಲಿಗೆ ಮುಟ್ಟಿಸುವ ತನಕ ಮಾಡಿರುವಂತಹದ್ದು. ಇದು ಪ್ರಜಾಪ್ರಭುತ್ವಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಸಂವಿಧಾನ ಬದ್ದವಾದ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕಾಗಿ ತನ್ನ ವಿರೋಧಿಗಳನ್ನು ಹೆದರಿಸಿ-ಬೆದರಿಸಿ ತಂತ್ರಗಾರಿಕೆ ಮಾಡ್ತಾ ಇದೆ ಎಂದು ಸಂಸತ್ತಿನಲ್ಲಿ ವಿರೋಧ ಪಕ್ಷ ನಾಯಕರಾದ ರಾಹುಲ್ ಗಾಂಧಿಯವರು ಇತರ ನಾಯಕರು ವಿಧಾನ ಸಭೆ ವಿಧಾನ ಪರಿಷತ್ತುಗಳಲ್ಲಿ ಕಾಂಗ್ರಸ್ ಪಕ್ಷದ ನಾಯಕರುಗಳು ಸಾದಾ ಹೇಳುತ್ತಾ ಬಂದರೂ ಅದನ್ನು ಅಲ್ಲಗಳೆದು, ಅಧಿಕಾರ ತನ್ನದೇ ಸರ್ವಸ್ವ ಎಂಬಂತೆ ಪ್ರಜಾಪ್ರಭುತ್ವ ಸಂವಿಂಧಾನವನ್ನು ದಿಕ್ಕರಿಸಿಂದಂತಹ ಬಿಜೆಪಿ ನಾಯಕರಿಗೆ ಇಂದು ಸುಪ್ರೀಂ ಕೋರ್ಟ್ ನೀಡಿದಂತಹ ತೀರ್ಮನ ಛಡಿಯೇಟನ್ನು ನೀಡಿದೆ.
ಬಿ.ಅರ್. ಆಂಬೇಡ್ಕರ್ ರವರ ಸಂವಿಂಧಾನದ ಬಗ್ಗೆ ಕಿಂಚಿತ್ತು ಗೌರವ ಇದ್ದರೆ, ಬಿಜೆಪಿ ಪಕ್ಷದ ನಾಯಕರುಗಳು ಹಾಗೂ ದೇಶದ ಪ್ರಧಾನ ಮಂತ್ರಿಗಳು ಕೂಡಲೇ ರಾಜಿನಾಮೇಯನ್ನು ನೀಡಬೇಕು. ಹಾಗೂ ರಾಜೀನಾಮೆ ನೀಡಿ, ದೇಶದ ಕ್ಷಮೆಯಾಚಿಸಬೇಕು ಎಂದು ಐವನ್ ಡಿʼಸೋಜಾ ಒತ್ತಾಯಿಸಿದ್ದಾರೆ.
ಬಿಜೆಪಿಯ ಅಡಳಿತ ಜನರಿಗೆ ಬೆದರಿಸಿ ಅಧಿಕಾರಕ್ಕೆ ಬಂದಿದೆ ಎಂದು ಸಾಬೀತಾಗಿದೆ.ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಇಡಿ ತನ್ನ ಪರಿಮಿತಿಯನ್ನು ಮೀರಿ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿರುವುದು. ಮತ್ತು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ನಿಮ್ಮ ರಾಜಕೀಯ ಜಗಳ ಇದ್ದರೆ ನಿಮ್ಮ ಮತದಾರರ ಜೊತೆ ಮಾಡಿ ಅಧಿಕಾರ ಉಪಯೋಗಿಸಿ ಮಾಡಬೇಡಿ ಎಂದು ಹೇಳಿರುವುದು ನೇರವಾಗಿ ಪ್ರಧಾನ ಮಂತ್ರಿಗಳಿಗೆ ನೀಡಿದಂತಹ ಸೂಚನೆಯಾಗಿದೆ. ಪ್ರಧಾನ ಮಂತ್ರಿಗಳು ದೇಶದ ಗೌರವಯುತವಾದ ಹುದ್ದೆಯಲ್ಲಿದ್ದು, ಪ್ರಧಾನಮಂತ್ರಿಗಳೇ ಇದನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂಬುದು ಮುಖ್ಯ ನ್ಯಾಯಾಧೀಶರ ಆದೇಶಲ್ಲಿ ಕಂಡು ಬರುತ್ತದೆ.
ಹಾಗಾಗಿ ಪ್ರಧಾನ ಮಂತ್ರಿಗಳ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ಐವನ್ ಡಿʼಸೋಜಾ ಹೇಳಿದ್ದಾರೆ. ದೇಶದ ಲೋಕಸಭೆಯಲ್ಲಿಯೂ ಇದೆರ ಬಗ್ಗೆ ಪದೇ- ಪದೇ ಪ್ರಸ್ತಾಪ ವಾಗುತ್ತಿದ್ದರೂ, ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಯಾವುದೇ ರೀತಿಯ ಗೌರವವನ್ನು ನೀಡದೇ ಪ್ರಜಾಪ್ರಭುತ್ವಕ್ಕೆ ದಕ್ಕೆಯನ್ನು ತರುವ ವಿಚಾರಗಳು ಇದು ಸಂವಿಧಾನವನ್ನು ಕಡೆಗಣಿಸಿದಂತಾಗುತ್ತದೆ. ಹಾಗಾಗಿ ಸಂವಿಧಾನದ ಗೌರವವನ್ನು ಉಳಿಸುದಕ್ಕಾಗಿ ಹಾಗೂ ದೇಶದ ಜನರ ಗೌರವವನ್ನು ಉಳಿಸಿಕೊಳ್ಳುವುದಕ್ಕಾಗಿ ದೇಶದ ಜನರು ನಂಬಿಕೊಂಡು ಬಂದಿರತಕ್ಕಂತಹ ಸಂವಿಧಾನವನ್ನು ಮತ್ತಷ್ಟು ಗಟ್ಟಿ ಮಾಡುವುದಕ್ಕಾಗಿ ದೇಶದ ಪ್ರಧಾನ ಮಂತ್ರಿಗಳು ಸುಪ್ರೀಂ ಕೋರ್ಟ್ ನ ಅಧೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ತಮ್ಮ ಹುದ್ದೆಗೆಕೂಡಲೇ ರಾಜಿನಾಮೇಯನ್ನು ನೀಡಬೇಕು ಎಂದು ಐವನ್ ಡಿʼಸೋಜಾರವರು ವಿನಂತಿಸಿದ್ದಾರೆ.