40 ವರುಷಗಳ ಕಾಲ ಪಂಜ್‌ಶಿರ್ ಪ್ರಾಂತ್ಯಕ್ಕೆ ಯಾವ ಅನ್ಯ ಶಕ್ತಿಯೂ ಕಾಲಿಡದಂತೆ ಪಡೆ ರಚಿಸಿದ್ದ ನಾಯಕ, ಪಂಜ್‌ಶಿರ್ ಸಿಂಹ ಅಹ್ಮದ್ ಶಾ ಮಸೌದ್ ಅವರ ಸಮಾಧಿಯನ್ನು ಗುರುವಾರ ತಾಲಿಬಾನಿಗರು ಗುರುವಾರ ನಾಶ ಮಾಡಿದರು.

ಬಂಡಾಯ ಕಮಾಂಡರ್ ಆಗಿದ್ದ ಮುಜಾಹಿದ್ದೀನ್ ನಾಯಕರೂ ಆಗಿದ್ದ ಅಹ್ಮದ್ ಶಾ ಮಸೌದ್‌ರನ್ನು 2001ರಲ್ಲಿ ಅಲ್ ಖೈದಾ ಮಂದಿ ಪತ್ರಿಕೆ ಸಂದರ್ಶನದ ಸೋಗಿನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ ಕೊಂದಿದ್ದರು. ಆಮೇಲೆ ಅವರ ಮಗ ಅಹಮ್ಮದ್ ಮಸೌದ್ ಮತ್ತು ಮಿತ್ರು ಪಂಜ್‌ಶಿರ್ ಮಿಶನ್ ಮುನ್ನಡೆಸಿದ್ದರು.