ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ಸಿಒಡಿಪಿ) (ರಿ) ಮತ್ತು ಸಿಇಐ ಇಟೆಲಿ ಇದರ ಜಂಟಿ ಆಶ್ರಯದಲ್ಲಿ ಟೈಲರಿಂಗ್ ತರಬೇತಿ ಪಡೆದ ಸದಸ್ಯರಿಗೆ ಸರ್ಕಾರದಿಂದ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಮುಕ್ಕ ಪರಿಸರದ ಚೇಳ್ಯಾರು ಸಭಾಭವನದಲ್ಲಿ ದಿನಾಂಕ 08.09.2021 ರಂದು ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆರ್ಥಿಕ ಸಾಕ್ಷಾರತ ಸಮಾಲೋಚಕರು (FLC) ಲತ್ತೀಶ್ ಇವರು ವಿವಿಧ ಸರ್ಕಾರಿ ಯೋಜನೆ ಪಡೆಯಲು ಇರುವ ಅರ್ಹತೆ ಅರ್ಜಿ ನೀಡಬೇಕಾದ ವಿಧಾನ ಅರ್ಹರಿಗೆ ಲಭಿಸದಿದ್ದಲ್ಲಿ ಏನು ಮಾಡಬಹುದೆಂಬ ಸವಿಸ್ತರಾ ಮಾಹಿತಿಯನ್ನು ನೀಡಿದರು. ಸರ್ಕಾರದ ವಿವಿಧ ಯೋಜನೆಗಳು ತಲುಪಬೇಕಾದ ವ್ಯಕ್ತಿಗೆ ತಲುಪಿಸಲು ನಮಗೆ ಪ್ರತಿಯೊಬ್ಬರಿಗೆ ಜವಬ್ದಾರಿ ಇದೆ ಎಂದು ಕರೆ ನೀಡಿದರು. ಇವರು ಬ್ಯಾಂಕ್ ವ್ಯವಹಾರವನ್ನು ಮನೆಯಲ್ಲಿ ಇದ್ದು ಮೊಬೈಲ್ ಆ್ಯಪ್‍ನ ಮೂಲಕ ಹೇಗೆ ವ್ಯವಹರಿಸುವ ಬಗ್ಗೆ ಹಾಗೂ ವಿವಿಧ ಸರ್ಕಾರಿ ಯೋಜನೆಗಳಾದ ಕಿಶೋರ್ ಯೋಜನೆ, ತರುಣ್ ಯೋಜನೆ, ವೃದ್ಧಾಪ್ಯ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY), ಪ್ರಧಾನ ಮಂತ್ರಿ ಜನ್‍ಧನ್ ಯೋಜನೆ (PMJDY), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ (PMJDY), ಅಟಲ್ ಫೆನ್ಶನ್ ಯೋಜನೆ (APY), ಪ್ರಧಾನ ಮಂತ್ರಿ ಮುದ್ರಾ ಯೋಜನೆ ಇತ್ಯಾದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ್ ಸಂಸ್ಥೆಯ ಪ್ರೋಗ್ರಾಮ್ ಮಾನ್ಯೇಜರ್ ಆದ ಜೀವನ್ ಕೊಲ್ಯ ಇವರು ಸ್ವ ಸಹಾಯ ಸಂಘ ರಚಿಸಲು ಕರೆ ನೀಡಿ ಈ ಮೇಲಿನ ಯೋಜನೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಸಿಒಡಿಪಿ ಸಂಸ್ಥೆಯ ಪ್ರೋಗ್ರಾಮ್ ಮಾನೇಜರ್ ಕುಮಾರಿ ಲಿನೆಟ್‍ರವರು ಉಪಸ್ಥಿತರಿದ್ದರು.
ಸಿಒಡಿಪಿ ಸಂಸ್ಥೆಯ ಕಾರ್ಯಕರ್ತರಾದ ಪುಷ್ಪವೇಣಿ ಕಾರ್ಯಕ್ರಮವನ್ನು ಆಯೋಜಿದರು ಮತ್ತು ಕಲಾಗಿರೀಶ್‍ರವರು ವಂದಿಸಿದರು.
ಒಟ್ಟು 35 ಮಂದಿ ಈ ತರಬೇತಿಯಲ್ಲಿ ಪಾಲ್ಗೊಂಡರು.