ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಭರತ್ ಶೆಟ್ಟಿ ಪಮ್ಮೊಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಯಶೋಧಾ ಶೆಟ್ಟಿ ಕುಂಠಿನಿ, ಕಾರ್ಯದರ್ಶಿಯಾಗಿ ಪ್ರಕಾಶ ಶೆಟ್ಟಿ ಮಜಲುಮನೆ, ಕೋಶಾಧಿಕಾರಿಯಾಗಿ ಪ್ರಿತೇಶ್ ಶೆಟ್ಟಿ ಕುಂಠಿನಿ,ಸದಸ್ಯರಾಗಿ ಗಣೇಶ್ ನಾಯ್ಕ್, ವಿಶ್ವನಾಥ ಪೂಜಾರಿ, ವೀಣಾ ಮಡಿವಾಳ ಹಾಗೂ ಅರ್ಚಕರಾಗಿ ಕೃಷ್ಣಮೂರ್ತಿ ಭಟ್ ಆಯ್ಕೆಯಾಗಿದ್ದಾರೆ. 8 ಜನ ವ್ಯವಸ್ಥಾಪನ ಸಮಿತಿಯ ಸದಸ್ಯರಲ್ಲಿ ಇಬ್ಬರು ಗೈರಾಗಿದ್ದರು.
ಗ್ರಾಮ ಆಡಳಿತಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಪ್ರಮೋದ್ ಸುವರ್ಣ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾಮ ಸಹಾಯಕ ಉದಯ ನಾಯ್ಕ್ ಸಹಕರಿಸಿದರು.