ಕಾರ್ಕಳ, ಜೂಲೈ 14:  ಸರ್ವಧರ್ಮ ಸಮನ್ವಯದ ಸೌಹಾರ್ದತೆಯ ಸಂಚಾರ ಇಂದು ಕಾರ್ಕಳ ಜಾಮಿಯಾ ಮಸೀದಿಯಿಂದ ಕಾರ್ಕಳ ಬಸ್ ನಿಲ್ದಾಣದ ವರೆಗೆ ವಿವಿಧ ಧರ್ಮಗಳ ಧರ್ಮಗುರುಗಳ ಹಾಗೂ ಧಾರ್ಮಿಕ ನಾಯಕರ ಕೂಡುವಿಕೆಯಿಂದ ನಡೆಯಿತು.

ಕಾರ್ಕಳ ಬಸ್ಟ್ಯಾಂಡ್ ವಠಾರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸುನ್ನಿ ನೇತಾರ ಪ್ರಗಲ್ಬ ಪಂಡಿತ, ಖ್ಯಾತ ವಾಗ್ಮಿ ಎಮ್ ಎಸ್ ಎಮ್ ಅಬ್ದುಲ್ ರಶೀದ್ ಝನಿ ಖಾಮಿಲ್ ಸಖಾಫಿ, ನಡಿಗೆ ಹೃದಯದ ಸಂಚಲನ ಉತ್ತಮಗೊಳಿಸಿದರೆ ಸೌಹಾರ್ದ ನಡಿಗೆ ಮನುಷ್ಯನ ಮನಸ್ಸು ಮನಸ್ಸುಗಳ ಸೌಹಾರ್ದತೆಯನ್ನು ಅಮರಗೊಳಿಸುತ್ತದೆ. ಭಾರತದ ವಿಶಾಲ, ಅದ್ಭುತ, ಉಜ್ವಲ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮನ ಮನಸ್ಸುಗಳನ್ನು ಜೋಡಿಸುವ ಸೌಹಾರ್ದತೆಯ ಕೊಂಡಿಗಳಾದ ನಾವು ಆಚಾರ, ವಿಚಾರ, ಕರ್ಮ, ಧರ್ಮ ಬೇರೆ ಬೇರೆಯಾದ ಧರ್ಮಗಳ ಅನುಯಾಯಿಗಳಾಗಿದ್ದರೂ ಎಲ್ಲಾ ಧರ್ಮಗಳ ಸಾರ ಒಂದೇ ಆಗಿದೆ. ದೇಶದಲ್ಲಿ ಸಾವಿರಾರು ಭಾಷೆ ಚಾಲ್ತಿಯಲ್ಲಿದ್ದರೂ ಹೃದಯದ ಭಾಷೆ ಒಂದೇ ಆಗಿದೆ. ಮನುಷ್ಯನ ಆರ್ಥವತ್ತಾದ, ನಿಷ್ಕಲ್ಮಶ, ನಿಷ್ಕಳಂಕ ಮಾತು ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಲಿದೆ ಎಂದರು.  

ಮೂಡಬಿದ್ರಿ ಜೈನ ಮಠದ ಧರ್ಮಗುರುಗಳಾದ ಸ್ವಸ್ತಿಶ್ರೀ ಶ್ರೀ ಚಾರು ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಮಾತನಾಡಿ, ತಮ್ಮ ಧರ್ಮಗಳನ್ನು ಶ್ರದ್ದೆಯಿಂದ ಆಚರಿಸುವ ಜೊತೆಗೆ ಇತರ ಧರ್ಮಗಳನ್ನ ಗೌರವಿಸಬೇಕು, ಪರದರ್ಮವನ್ನು ಗೌರವಿಸಿದರೆ ಮಾತ್ರ ವಸುದೈವ ಕುಟುಂಬಕಮ್ ಎಂಬ ನಮ್ಮ ದ್ಯೇಯ ವಾಕ್ಯ ನಮ್ಮ ಸಂಸ್ಕೃತಿ, ನಮ್ಮ ಧರ್ಮದ ಸಾರವನ್ನು ಎತ್ತಿ ಹಿಡಿದಂತಾಗುತದೆ. ನಮ್ಮ ದೇಶಾಭಿಮಾನ, ಶಾಂತಿ, ಸೌಹಾರ್ದತೆ, ಮಾನವ ಧರ್ಮ ನೆಲೆ ನಿಲ್ಲುವವರೆಗೆ ನಾವು ಯಾರು ವಿರಮಿಸಬಾರದು ಎಂದು ಅವರು ಕರೆ ನೀಡಿದರು. 

ಇತಿಹಾಸ ಪ್ರಸಿದ್ಧ ಕಾರ್ಕಳ ಅತ್ತೂರು ಬಸಿಲಿಕಾ ಧರ್ಮಗುರುಗಳಾದ ವಂ. ರೆ. ಫಾ. ಅಲ್ಬನ್  ಡಿಸೋಜಾ ರವರು ಮಾತನಾಡಿ ನಮ್ಮ ನಾಡಿನಲ್ಲಿ ಸ್ವರ್ಗ ರಾಜ್ಯ ಕಟ್ಟೋದು ನಮ್ಮ ಧರ್ಮ, ಮನುಷ್ಯ ಮನುಷ್ಯನನ್ನು ಪ್ರೀತಿಸಿ ಗೌರವಿಸುವುದೇ ನಿಜವಾದ ಧರ್ಮ. ಮನುಷ್ಯರೆಲ್ಲರೂ ಒಂದಾಗಿ ಶಾಂತಿ ಸೌಹಾರ್ದತೆ ಪರಧರ್ಮ ಸಹಿಷ್ಣುತೆಯಿಂದ ಬೇರೆ ಧರ್ಮಗಳನ್ನು ಗೌರವದಿಂದ ಬಾಳಿ ಬದುಕಿದಾಗ  ರಾಷ್ಟ್ರೀಯ ಏಕತೆ ಸಾಧ್ಯ. ಮಾನವೀಯತೆ ಮನುಷ್ಯನ ಮೂಲ ಮಂತ್ರ ವಾಗಬೇಕು ಎಂದರು.

ಪಡುತಿರುಪತಿ ವೆಂಕಟರಮಣ ದೇವಳದ ಆಡಳಿತ ಮುಕ್ತೆಸರ ಉಲ್ಲಾಸ್ ಶೆಣೈ ಮಾತನಾಡಿ, ದೇವರು ಪ್ರಾಣಿಗಳಿಗೆ ಮನುಷ್ಯನ ಹಾಗೆ ಬುದ್ದಿ ನೀಡಲಿಲ್ಲ ಬದಲಾಗಿ ದೇವರು ಮನುಷ್ಯನಿಗೆ ಬುದ್ದಿ  ಜ್ಞಾನ ಅರಿವು ನೀಡಿದ್ದಾನೆ. ಪ್ರಾಣಿಗಳಲ್ಲಿ ಮೃಗಿಯ ವರ್ತನೆ ತಮ್ಮ ಆಹಾರಕ್ಕಾಗಿ ಹೊರತು ತೊಂದರೆ ಗೊಳಿಸುವುದಕ್ಕಾಗಿ ಅಲ್ಲ. ನಾವು ಅದನ್ನು ಮರೆತು ಮೃಗಗಳಾಗುವುದನ್ನು ಬಿಟ್ಟು ಮನುಶ್ಯರಾಗುವುದನ್ನು ಕಲಿಯಬೇಕು ಈ ಸೌಹಾರ್ದ ನಡಿಗೆಯಲ್ಲಿ ಅರಿವಿನ ಗುರುಗಳ ಮಾರ್ಗದರ್ಶನ ಚೆನ್ನಾಗಿ ಮೂಡಿ ಬಂದಿದೆ ಎಂದರು.

 ಈ ಸಂದರ್ಭದಲ್ಲಿ  ಕರ್ನಾಟಕ ಎಸ್ವೈಸ್ ಉಪಾಧ್ಯಕ್ಷರು ಅಸ್ಸೈಯ್ಯದ್ ಇಲ್ಯಾಸ್ ತಂಗಳ್ ಕೊಡಗು, ಸೌಹಾರ್ದ ಸಂಚಾರ ಕರ್ನಾಟಕ ಸ್ವಾಗತ ಸಮಿತಿ ಅಧ್ಯಕ್ಷ ಅಸೈಯದ್ ಮೊಹಮ್ಮದ್ ಶಾಫಿ ನಯೀಮಿ ತಂಗಳ್ ಹಾಸನ, ಎಸ್ ವೈ ಎಸ್ ರಾಜ್ಯ ಅಧ್ಯಕ್ಷ ಬಶೀರ್ ಸಅದಿ ಆಪ್ಲ್ಯಾಳಿ ಬೆಂಗಳೂರ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಮೊಂಟುಗೊಳಿ, ಎಸ್ ವೈ ಎಸ್ ಮುಖಂಡ ಮೊಹಮ್ಮದ್ ಅಲಿ ಸಾಖಾಫಿ ಸುರಿಬೈಲ್, ತ್ವಯಿಭಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ  ಅಹ್ಮದ್ ಶರೀಫ್ ಸಹದಿ ಕಿಲ್ಲೂರ್, ಎಸ್ ವೈ ಎಸ್ ಕಾರ್ಕಳ ವಲಯದ್ಕ್ಷ ಸುಲೈಮಾನ್ ಸಹದಿ ಅಪ್ಲಲಿ ಹೊಸ್ಮಾರು, ಪ್ರಧಾನ ಕಾರ್ಯದರ್ಶಿ ಡಾ! ಕೆ.ಎಂ.ಸಿದ್ದೀಖ್ ಮೋಂಟುಗೋಳಿ. ಕೋಶಾಧಿಕಾರಿ ಮನ್ಸೂರ್ ಶಿವಮೊಗ್ಗ, ಸ್ವಾಗತ ಸಮಿತಿ ಚೇರ್ಮನ್ ನಿಟ್ಟೆ ಮುಹ್ಯಿದ್ದೀನ್ ಹಾಜಿ, ಕಾಂಗ್ರೆಸ್ ನಾಯಕ ಶುಭದ ರಾವ್, ಶೇಕ್ ಶಬ್ಬೀರ್ ಮಿಯ್ಯಾರು, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ಅಧ್ಯಕ್ಷ ನಾಸಿರ್ ಶೇಕ್, ದ.ಸಂ.ಸ ಮುಖ್ಯಸ್ಥ ಅಣ್ಣಪ್ಪ ನಕ್ರೆ ಕ.ರ.ವೇ ಅಧ್ಯಕ್ಷ ರಾದ  ಇಮ್ರಾನ್, ಹನೀಫ್ ಕೌನ್ಸಿಲರ್  ಅಶ್ಫಾಖ್ ಅಹ್ಮದ್ , ಉಪಸ್ಥಿತರಿದ್ದರು.

N.C. ರಹೀಂ ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಸ'ಅದಿ ಹೊಸ್ಮಾರ್ ಸ್ವಾಗತಿಸಿದರು. 

ಕಿಲ್ಲೂರು ಶರೀಫ್ ಸ'ಅದಿ ಧನ್ಯವಾದವಿತ್ತರು.