ಕೆನರ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ಸಿ.ಒ.ಡಿ.ಪಿ) (ರಿ) ಮಂಗಳೂರು ಮತ್ತು ಸಿ.ಇ.ಐ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸ್ವ ಸಹಾಯ ಸಂಘದ ಸದಸ್ಯರಿಗೆ ಸ್ವಾಭಾವಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮ ದಿನಾಂಕ 05.09.2021 ರಂದು ನವ ಜ್ಯೋತಿ ನಗರ ಮೇರ್ಲಪದವಿನಲ್ಲಿ ಜರುಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಸಿ.ಒ.ಡಿ.ಪಿ ಸಂಸ್ಥೆಯ ಸಂಯೋಜಕಿಯಾದ ಶ್ರೀಮತಿ ರೀಟಾ ಡಿ ಸೋಜರವರು ನೈಸರ್ಗಿಕ ಸಂಪನ್ಮೂಲವೆಂದರೇನು? ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ವಿಧಾನಗಳು, ಇಂಗುಗುಂಡಿ ರಚನೆ, ಪ್ರಕೃತಿಯ ವಸ್ತುಗಳಿಗೆ ಉಂಟಾಗುತ್ತಿರುವ ಮಾಲಿನ್ಯಗಳು ಮತ್ತು ಅದಕ್ಕೆ ಪರಿಹಾರ ಕ್ರಮಗಳನ್ನು ಹೇಗೆ ಕೈಗೊಳುವುದು ಎಂಬುವುದರ ಬಗ್ಗೆ ವಿವರಿಸಿದರು.  ಪ್ರಕೃತಿ ಮನುಷ್ಯನ ಸ್ವಾರ್ಥಕ್ಕಾಗಿ ಹೇಗೆ ಬಳಕೆಯಾಗುತ್ತಿದೆ, ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ನಮಗೆ ಸಾಧ್ಯವಿರುವಷ್ಟು ನಮ್ಮ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡೋಣವೆಂದು ನೆರೆದಂತಹ ಸದಸ್ಯರಿಗೆ ಹಾಗೂ ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕೆಂದು ಕರೆ ನೀಡಿದರು  ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಹಾಗೂ ಪ್ಲಾಸ್ಟಿಕ್‍ನ್ನು ಅಲ್ಲಲ್ಲಿ ಬಿಸಡಬಾರದು.  ಅದು ಕರಗುವುದಿಲ್ಲ ಎಂದು ಹೇಳಿದರು.

ಸಿಒಡಿಪಿ ಸಂಸ್ಥೆಯ ಕಾರ್ಯಕರ್ತೆಯಾದ ಕಲಾಗಿರೀಶ್‍ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಕಾರ್ಯಕ್ರಮವನ್ನು ಸ್ವ ಸಹಾಯ ಸಂಘದ ಅದ್ಯಕ್ಷರಾದ ಶ್ರೀಮಾನ್ ರಾಜೇಶ್‍ರವರು ಸ್ವಾಗತಿಸಿ ಹಾಗೂ ಕಾರ್ಯರರ್ಶಿ ಅಮೀತರವರು ವಂದಿಸಿದರು.