ನವೆಂಬರ್ ಅಂತ್ಯದಲ್ಲಿ ಮತದಾನ ನಡೆದು ಡಿಸೆಂಬರ್ ಮೊದಲ ವಾರ ಮುಗಿಯುವುದರೊಳಗೆ ಹೊಸ ಸರಕಾರ ರಚನೆ ಆಗಲಿರುವ ಪಂಚ ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ.

ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸಗಡ, ಮಿಜೋರಾಂ, ತೆಲಂಗಾಣ ಇವೇ ಮುಂದಿನ ತಿಂಗಳು ಮತದಾರರ ಎದುರು ನಿಲ್ಲುವ ರಾಜ್ಯಗಳಾಗಿವೆ. 

ಕಾಂಗ್ರೆಸ್, ಬಿಜೆಪಿ ನಡುವೆ ಪ್ರಮುಖ ಸ್ಪರ್ಧೆ ಇದೆ. ತೆಲಂಗಾಣದಲ್ಲಿ ಹೆಸರು ಬದಲಾಯಿಸಿಕೊಂಡಿರುವ ಭಾರತೀಯ ರಾಷ್ಟ್ರ ಸಮಿತಿಯ ಭವಿಷ್ಯ ದೇಶದ ಭವಿಷ್ಯ ನಿರ್ಧಾರ ಆಗಲಿದೆ. ಮಿಜೋರಾಂ ಮರಿ ಪಕ್ಷಗಳದೇ ಕಾರುಬಾರು.