ಶಿವಪುರದ ಬಳಿ ಬಟ್ರಾಡಿಯಲ್ಲಿ ಈಜಲು ನದಿಗಿಳಿದ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವಿಗೆ ಸೇರಿರುವರು.
ಎಲ್ಲರ 18ರ ಪ್ರಾಯದವರು. ಪಾಡಿಗಾರ್‌ನ ಕಿರಣ್, ಸುದರ್ಶನ್ ಮತ್ತು ಬಜೆಯ ಸೋನಿತ್ ನೀರು ಗೋರಿ ಆದವರು. ಇವರಲ್ಲಿ ಕಿರಣ್ ಪೂಜಾರಿ ಇನ್ನಿಬ್ಬರು ಮುಳುಗುವುದನ್ನು ತಪ್ಪಿಸಲು ಹೋಗಿ ತಾನೂ ಬಲಿಯಾಗಿದ್ದಾನೆ.
12 ಜನ ವಿದ್ಯಾರ್ಥಿಗಳು ಕಾಲೇಜಿಗೆ ಸರಿಯಾಗಿ ಹಾಜರಾಗದೆ ಡಿಬಾರ್ ಆಗಿದ್ದು, ಕಾಡು ಮೇಡು ಅಲೆಯುತ್ತಿದ್ದರು. ನಿನ್ನೆ ಅವರಲ್ಲಿ ಮೂವರು ದುರ್ಮರಣ ಕಂಡಿದ್ದಾರೆ.
ಹೆಬ್ರಿ ಪೋಲೀಸರು ಸ್ಥಳ ಪರಿಶೀಲನೆ, ಮಹಜರು ನಡೆಸಿದರು. ಮುಳುಗು ತಜ್ಞರಾದ ವಿಜಯ್, ಸದಾನಂದ, ಕೃಷ್ಣಮೂರ್ತಿ, ಕೆಂಚ ಇವರು ಮೂರು ಗಂಟೆ ಪ್ರಯತ್ನ ಪಟ್ಟು ಶವಗಳನ್ನು ಹೊರತೆಗೆದರು.