ಶನಿವಾರ ಮುಂಜಾವ ಪಂಪ್‌ವೆಲ್ ಲಾಡ್ಜ್‌ನಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣೆ ಪೋಲೀಸರು ಮತ್ತೊಬ್ಬನನ್ನು ಬಂಧಿಸುವ ಮೂಲಕ ಬಂಧಿತರ ಸಂಖ್ಯೆ ಆರಕ್ಕೆ ಏರಿತು.

ಆರು ಜನ ಪಾರ್ಟಿ ನಡೆಸಿ ಧನುಷ್ ಜೊತೆಗೆ ರಾಜಿ ಪಂಚಾಯತಿ ನಡೆಸಿದ್ದರು. ಆದರೆ ಅದು ಕೊಲೆಯಲ್ಲಿ ಮುಕ್ತಾಯವಾಯಿತು. ಕೊಲೆಯಾದ ಪಚ್ಚನಾಡಿಯ ಧನುಷ್ ಮೇಲೆ ಕಂಕನಾಡಿ ಗ್ರಾಮಾಂತರ ಪೋಲೀಸು ಠಾಣೆಯಲ್ಲಿ ದೂರುಗಳು ಹಿಂದೆಯೇ ಇದ್ದವು.

ಆತನು ಸುರತ್ಕಲ್‌ನ ಜೇಸನ್ ಮನೆಯವರನ್ನು ಕೆಟ್ಟದಾಗಿ ಬಯ್ಯುತ್ತಿದ್ದ. ಈಗಾಗಲೇ ಪಾಂಡೇಶ್ವರ ಠಾಣೆ ಮೊದಲಾದ ಕಡೆ ಮೊಕದ್ದಮೆ ಎದುರಿಸುವ ಈ ಆರು ಜನರಲ್ಲಿ ರಾಜಿ ಮಾಡಿಸಲು ಕೂರಿಸಿದ್ದ. ಆದರೆ ಧನುಷ್ ತನ್ನ ಚಾಳಿ ಬಿಡಲಿಲ್ಲ. ಅದು ವಿಕೋಪಕ್ಕೆ ಹೋಗಿ ಕೊಲೆಯಾಗಿದೆ ಎಂದು ಪೋಲೀಸರ ತನಿಖೆಯಿಂದ ತಿಳಿದು ಬಂದಿದೆ.