ಎತ್ತರ ಜಿಗಿತ ಟಿ64 ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ 2.07 ಮೀಟರ್ ಹೈಜಂಪ್ ಮಾಡಿ ಬೆಳ್ಳಿ ಗೆದ್ದರು. ಭಾರತದ ಪದಕ ಸಂಖ್ಯೆ ಮೊದಲ ಬಾರಿಗೆ ಡಜನ್ ದಾಟಿತು.
ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ 18ರ ಪ್ರಾಯದ ಪ್ರವೀಣ್ ಕುಮಾರ್ ಹಾರಿದ ಎತ್ತರ ಹೈಜಂಪ್‌ನಲ್ಲಿ ಏಶಿಯನ್ ಹೊಸ ದಾಖಲೆಯಾಗಿದೆ.
ಈ ವಿಭಾಗದಲ್ಲಿ ಬ್ರಿಟನ್ನಿನ ಜೋನಾಥನ್ ಬ್ರೂಮ್ 2.10 ಮೀಟರ್ ಎತ್ತರ ಜಿಗಿದು ಸ್ವರ್ಣ ಸಾಧಿಸಿದರು.