ಐಶಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆದ ಪ್ರಕರಣದ ವಿಚಾರಣೆಯನ್ನು ದೆಹಲಿ ಎನ್‌ಸಿಬಿ- ಮಾದಕ ವಸ್ತು ನಿಯಂತ್ರಣ ಘಟಕಕ್ಕೆ ವಹಿಸಲಾಗಿದೆ.

ನವೆಂಬರ್ 6ರ ಬೆಳಿಗ್ಗೆ ಅವರು ಮುಂಬಯಿಗೆ ಬಂದರು. ಮುಂಬಯಿ ಎನ್‌ಸಿಬಿಯ ಸಮೀರ್ ವಾಂಖೆಡೆ ಅವರ ಮೇಲೂ ಆರೋಪ ಇರುವುದರಿಂದ ಅವರನ್ನು ತನಿಖಾ ಜವಾಬ್ದಾರಿಯಿಂದ ಕೈಬಿಡಲಾಗಿದೆ.

ಆದರೆ ಸಮೀರ್ ವಾಂಖೆಡೆಯವರು ಬೇರೆಯೇ ಹೇಳಿಕೆ ನೀಡಿ, ದೆಹಲಿ ಎನ್‌ಸಿಬಿ ಮಂದಿ ಮುಂಬಯಿ ಎನ್‌ಸಿಬಿ ಜೊತೆ ಸೇರಿ ತನಿಖೆ ನಡೆಸಲಿದೆ ಎಂದಿದ್ದಾರೆ.