ತಿಬ್ಬತ್ ಗಡಿಯಲ್ಲಿ ಅರುಣಾಚಲ ಪ್ರದೇಶದ ವಿವಾದಿತ ಪ್ರದೇಶದಲ್ಲಿ ಚೀನಾ 100 ಮನೆಗಳ ಗ್ರಾಮವೊಂದನ್ನು ನಿರ್ಮಿಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

ಚೀನಾವು ಭಾರತದ ಸೇನಾ ವಾಸ್ತವ್ಯ ಮತ್ತು ಭಾರತವು ಚೀನಾ ಸೇನಾ ವಾಸ್ತವ್ಯದ ಬಗೆಗೆ ಪರಸ್ಪರ ಆರೋಪ ಮಾಡಿವೆ. ಬ್ರಿಟಿಷರ ಕಾಲದ ಎಲ್‌ಎಸಿ ಗಡಿ ನಿಯಂತ್ರಣ ಗೆರೆಯನ್ನು ಒಪ್ಪಲು ಚೀನಾ ತಯಾರಿಲ್ಲದಿರುವುದೇ ಈ ಸಮಸ್ಯೆಗಳಿಗೆಲ್ಲ ಕಾರಣವಾಗಿದೆ. ಆಂತರಿಕ ವಿಷಯದಲ್ಲಿ ಕೈ ಹಾಕದಂತೆ ಚೀನಾ ಯುಎಸ್‌ಎಗೂ ಹೇಳಿದೆ ಎಂದು ವರದಿಯಾಗಿದೆ.