ಹರಿಯಾಣದ ಹಿಸ್ಸಾರ್‌ನಲ್ಲಿ ರೈತರ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದರಿಂದ ಬಿಜೆಪಿ ಸಂಸದ ರಾಮಚಂದರ್ ಜಂಗ್ರಾ ಅವರ ಕಾರು ಏಟು ತಿಂದಿದೆ.

ಇಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಸಂಸದರ ಕಾರು ತಡೆದ ರೈತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಭಾರೀ ಪೋಲೀಸು ರಕ್ಷಣೆಯಲ್ಲಿ ರೈತರ ಪ್ರಶ್ನೆಗೆ ಉತ್ತರಿಸದೆ ಪರಾರಿಯಾಗುತ್ತಿದ್ದ ಸಂಸದರ ಕಾರಗೆ ರೈತರು ಬಡಿಗೆ ಎಸೆದುದರಿಂದ ಕಾರು ಜಖಂ ಆಗಿದೆ. ಸಂಸದರು ಇದು ನನ್ನ ಕೊಲೆ ಯತ್ನ ಎಂದು ದೂರು ನೀಡಿರುವುದಾಗಿ ತಿಳಿದು ಬಂದಿದೆ.