ಕಾರ್ಕಳ: ಇತ್ತೀಚೆಗೆ ನಿಧನರಾದ ಕಥೊಲಿಕ್ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ ಏಪ್ರಿಲ್ 28 ರಂದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಚರ್ಚ್ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು, ದಿವ್ಯ ಬಲಿ ಪೂಜೆಯ ನಂತರ ಶ್ರದ್ಧಾಂಜಲಿ ಸಭೆ ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾದ ಜೆ. ಸಿ. ರಾಜೇಂದ್ರ ಭಟ್ ರವರು ಪೋಪ್ ಫ್ರಾನಿಸ್ ಅವರ ಜೀವನದ ಬದುಕಿನ ಬಗ್ಗೆ, ಅವರ ಅರ್ಥಪೂರ್ಣವಾದ ಸಂದೇಶಗಳ ಬಗ್ಗೆ ಮಾತನಾಡುತ್ತಾ ಪೋಪ್ ಅವರು ಹನ್ನೆರಡು ವರ್ಷಗಳ ಕಾಲ ಪೋಪ್ ಹುದ್ದೆಯನ್ನ ಜಗತ್ತಿನ ಅತಿ ಎತ್ತರವಾದ ಶಿಖರಕ್ಕೆ ಅವರು ಏರಿಸ್ತಾ ಹೋದ್ರು ಎಂದು ತಮ್ಮ ಭಾಷಣವನ್ನ ಮುಂದುವರಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರಾದ ಉದಯ ಕುಮಾರ್ ಶೆಟ್ಟಿ ಮುನಿಯಲ್ ರವರು ಪೋಪ್ ಫ್ರಾನ್ಸಿಸ್ ರವರ ಫೋಟೋ ನೋಡಿದಾಗ ಅವರ ವ್ಯಕ್ತಿತ್ವ ಹೇಗೆ ಮುಗ್ದವಾಗಿದೆ ಎಂದು ತಿಳಿಯಬಹುದಾಗಿದೆ ಎಂದು ತುಳು ಭಾಷೆಯಲ್ಲಿ ಚಿಕ್ಕ ಮತ್ತು ಚೊಕ್ಕ ಭಾಷಣದಲ್ಲಿ ಹೇಳಿದರು.
ಆದೇ ರೀತಿ ಚರ್ಚ್ ನ ಮುಖ್ಯಸ್ಥರಾದ ರೆಕ್ಟರ್ ವಂದನೀಯ ಗುರು ಅಲ್ಬನ್ ಡಿಸೋಜಾ ರವರು ಅಗಲಿದ ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತ ನಮಗೆಲ್ಲರಿಗೂ ಅವರು ಮಾದರಿಯಾಗಿದ್ದರು ಎಂದರು.
ನಿಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಿತಿನ್ ಸಾಲಿಯಾನ್, ಧರ್ಮ ಗುರುಗಳು, ಧರ್ಮ ಭಗಿನಿಯರು ಹಾಗೂ ಬಂಧು ಭಾಂಧವರು ಹಾಜರಿದ್ದರು.
ನಂತರ ಎಲ್ಲರು ಪೋಪ್ ಫ್ರಾನ್ಸಿಸ್ ರವರಿಗೆ ಪುಷ್ಪನಮನ ವನ್ನು ಅರ್ಪಿಸುತ್ತ ಕಾರ್ಯಕ್ರವನ್ನು ಮುಕ್ತಯಗೊಳಿಸಿದರು.
ಪ್ರೊ. ಅಶೋಕ್ ಡಿಸೋಜಾ ರವರು ಕಾರ್ಯಕ್ರಮವನ್ನು ನೀರೂಪಿಸಿದರು.