ಗುಜರಾತಿನ ವಲ್ಸದ್ ಜಿಲ್ಲೆಯ ಸಾರಿಗಮ್ ಜಿಐಡಿಸಿ ಪ್ರದೇಶದ ವಾನ್ ಪೆಟ್ರೋಕೆಮ್ ಫಾರ್ಮಾ ಕಂಪೆನಿಯಲ್ಲಿ ಸೋಮವಾರ ಹನ್ನೊಂದೂವರೆ ಗಂಟೆಗೆ ಆಕಸ್ಮಿಕ ಸ್ಫೋಟ ನಡೆದು ಇಬ್ಬರು ಸತ್ತು, ಇಬ್ಬರು ಗಾಯಗೊಂಡಿದ್ದಾರೆ.

ಕೂಡಲೆ ನೀರು ವಾಹನದೊಡನೆ ಬಂದೆವು, ಆದರೆ ರಾಸಾಯನಿಕ ಯಾವುದು ತಿಳಿಸುವವರು ಇರಲಿಲ್ಲ. ಹಾಗಾಗಿ ನೀರು ಹಾಕಿ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಲಿಲ್ಲ. ಎರಡು ಶವ ಸಿಕ್ಕಿತು, ಇಬ್ಬರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಸಾರಿಗಮ್‌ನ ಫೈರ್ ಫೈಟರ್ ರಾಹುಲ್ ಮುರಾರಿ ತಿಳಿಸಿದ್ದಾರೆ.

ರಾಸಾಯನಿಕ ಕ್ರಿಯೆ ಕಾರಣ ರಾತ್ರಿ ಕಾರ್ಯಾಚರಣೆ ನಡೆಸಿಲ್ಲ. ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಲಾಯಿತು. ಉಳಿದ ನೌಕರರ ವಿಷಯ ಇನ್ನಷ್ಟೆ ತಿಳಿದು ಬರಬೇಕು ಎಂದು ವಲ್ಸದ್ ಎಸ್‌ಪಿ ವಿಜಯ ಗುರ್ಜರ್ ತಿಳಿಸಿದ್ದಾರೆ.