ಉಡುಪಿ: ಭಾರತೀಯ ರಕ್ಷಣಾ ಇಲಾಖೆಗೆ ಭೂಮಿ ನೀಡುವ ಕುರಿತು ಭೂಮಿ ಹಂಚಿಕೆಯ ಸಂಬಂಧ ವಾಯು ಪಡೆಯ ಏರ್ ಮಾರ್ಷಲ್ ಮಣಿಕಂಠ ರವರು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರನ್ನು ಭೇಟಿ ಮಾಡಿ, ಚರ್ಚಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ವಾಯುಪಡೆಯ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಪಿ.ಎ ಶೈಲೇಶ್ ಕುಮಾರ್, ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗಡೆ ಉಪಸ್ಥಿತರಿದ್ದರು.

ಚರ್ಚೆಯ ನಂತರ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಸ.ನಂ. 30, 31, 34 ರ ಜಾಗವನ್ನು ಏರ್ ಮಾರ್ಷಲ್ ಮಣಿಕಂಠ ಅವರು ಖುದ್ದು ಪರಿಶೀಲನೆ ನಡೆಸಿದರು.