ಉಡುಪಿ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರು ಇವರ ವತಿಯಿಂದ ರಾಜಸ್ಥಾನ್, ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ್ ಮತ್ತು ಹರಿಯಾಣದ ವಿವಿಧೆಡೆ ಏರ್‍ಕ್ರಾಪ್ಟ್ ಡಿವಿಷನ್, ಹೆಚ್‍ಏಎಲ್ ಮೂಲಕ ನಾನ್ ಎಕ್ಸಿಕ್ಯೂಟಿವ್ ಕೇಡರ್‍ನಲ್ಲಿ 4 ವರ್ಷಗಳ ಅವಧಿಗೆ ಅಧಿಕಾರಾವಧಿ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಐ.ಟಿ.ಐ ಮತ್ತು ಡಿಪ್ಲೋಮಾ ತೇರ್ಗಡೆ ಹೊಂದಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಒಟ್ಟು 90 ಹುದ್ದೆಗಳು ಖಾಲಿ ಇದ್ದು, ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಅರ್ಜಿ ಸಲ್ಲಿಸಲು ಮಾರ್ಚ್ 13 ಕೊನೆಯ ದಿನ. 

ಅರ್ಜಿ ನಮೂನೆ ಹಾಗೂ ಹೆಚ್ಹಿನ ಮಾಹಿತಿಗಾಗಿ ವೆಬ್‍ಸೈಟ್ hr_ac@hal-india.co.in ಅಥವಾ ಸಹಾಯವಾಣಿ ಸಂಖ್ಯೆ: 0820-2574869 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.