ಉಡುಪಿ: ನಗರರಾಭಿವೃದ್ಧಿ ಇಲಾಖೆ, ಸ್ವಚ್ಛ ಭಾರತ್ ಮಿಷನ್ (ನಗರ) ಹಾಗೂ ಉಡುಪಿ ನಗರಸಭೆ ವತಿಯಿಂದ ಮಳೆಗಾಲದಲ್ಲಿ ಸಾಂಕ್ರಮಿಕ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಶುಚಿತ್ವವನ್ನು ಅಳವಡಿಸಿಕೊಳ್ಳಿ ರೋಗವನ್ನು ಓಡಿಸಿ ಎಂಬ ಅಭಿಯಾನದ ಭಾಗವಾಗಿ ಗ್ಲೋವಿನ್ ಸ್ಟಾರ್ ಅಕಾಡೆಮಿ ಇಂಟಿಗ್ರೇಟೆಡ್ ಡೆವಲಪ್‍ಮೆಂಟ್ ಸ್ಕೂಲ್‍ನಲ್ಲಿ ಡಯೇರಿಯಾ ತಡೆಗಟ್ಟುವಿಕೆ ಅಭಿಯಾನವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಪೌರಾಯುಕ್ತ ರಾಯಪ್ಪ ತ್ಯಾಜ್ಯ ನಿರ್ವಹಣೆ, ಪ್ಲಾಷ್ಟಿಕ್ ಬಳಕೆ ನಿಷೇಧ, ಸಾಂಕ್ರಮಿಕ ರೋಗಗಳ ಹರಡುವಿಕೆ ಮತ್ತು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. 

ನಗರಸಭಾ ಪರಿಸರ ಅಭಿಯಂತರರಾದ ಸ್ನೇಹ ಕೆಎಸ್, ಪ್ರಭಾರ ಆರೋಗ್ಯ ನಿರೀಕ್ಷಕ ಮನೋಹರ್, ಶಾಲಾ ಪ್ರಾಂಶುಪಾಲ ಡಾ. ಟಿ.ಜೆ ಕ್ವಾಡ್ರಸ್, ಮುಖ್ಯೋಪಾಧ್ಯಾಯಿನಿ ಶಾಂತಾ ಫೆರ್ನಾಂಡಿಸ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.