ಉಡುಪಿ: ಡಾ. ಜೊಯ್ಲಿಸ್ ನೊರೋನ್ಹಾ ಪ್ಯಾರಿಸ್ ನ ಈಸ್ಟ್ ಬ್ರಿಜ್ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಇನ್ ಹೆಲ್ತ್ ಕೇರ್ ಪದವಿ ಪಡೆದಿದ್ದಾರೆ. ಡಾ. ಜೊಯ್ಲಿಸ್ ನೊರೋನ್ಹಾ ಅವರು ಕೈಗೊಂಡ ಡೈನಾಮಿಕ್ಸ್ ಆಫ್ ರಿಸ್ಕ್ & ಪ್ರೊಟೆಕ್ಟಿವ್ ಫ್ಯಾಕ್ಟರ್ಸ್ ಫಾರ್ ಅನ್ ರಿಜಿಸ್ಟರ್ಡ್ ಮೆಡಿಕೇಶನ್ ಇನ್ ದ ಯುಇಎ ಮಾರ್ಕೆಟ್ - ಚಾಲೆಂಜರ್ಸ್ ಅಂಡ್ ಸೊಲ್ಯೂಷನ್ಸ್ ಅಧ್ಯಯನ ವಿಷಯಕ್ಕೆ ಈ ಪದವಿ ಲಭಿಸಿದೆ.
ದಾನಿಗಳು, ಪರೋಪಕಾರಿಯೂ ಆಗಿರುವ ಇವರು ಉಡುಪಿಯ ಕಲ್ಮಾಡಿ-ಕೊಡವೂರಿನ ದಿ. ಹೆನ್ರಿ ಮತ್ತು ಡಯಾನ ನೊರೋನ್ಹಾ ದಂಪತಿಗಳ ಪುತ್ರಿ. ಉಡುಪಿ ನಗರಸಭೆಯ ಮಾಜಿ ಸದಸ್ಯ ಹೊರ್ಮಿಸ್ ಸಹಿತ ಸಂತೋಷ್ ಮತ್ತು ಹನೀಶ್ ಇವರ ಸಹೋದರಿ. ಪ್ರಸ್ತುತ ಇವರು ದುಬೈನ ಫಾರ್ಮಾಸ್ಯೂಟಿಕಲ್ಸ್ ಕಂಪನಿಯ ಕಮರ್ಷಿಯಲ್ ಸೇಲ್ಸ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.