ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಉಡುಪಿ: ಜಿಲ್ಲೆಯಾದ್ಯಂತ ವಿಪರೀತ ಮಳೆ ಸುರಿಯುತ್ತಿದೆ. ಉಡುಪಿಯಿಂದ ಮಣಿಪಾಲಕ್ಕೆ ಬರುವ ಮಾರ್ಗದ ಮಣಿಪಾಲ ಸಮೀಪದ ಗುಡ್ಡದ ಮಣ್ಣು, ಕಲ್ಲು ಜರಿದು ಸುರಿಯುತ್ತಿರುವ ಮಳೆ ನೀರಿನೊಂದಿಗೆ ಜಾರಿ ಬಂದು ಲಕ್ಷ್ಮೀಂದ್ರ ನಗರದ ತಗ್ಗು ಪ್ರದೇಶದಲ್ಲಿ ಶೇಖರವಾಗಿದೆ. ಹಲವಾರು ವಾಹನಗಳನ್ನು ಏಕ ಮುಖದಲ್ಲಿ ನಿಲ್ಲಿಸಿ ಗಂಟೆಗಟ್ಟಲೆ ಕಾಯಬೇಕಾಯಿತು ಎಂದು ಸಾರ್ವಜನಿಕರು ತಿಳಿಸಿದರು.