ಉಡುಪಿ, ಆಗಸ್ಟ್ 19: ರೆಪ್ರೆಸೆಂಟೇಶನ್ ಆಫ್ ದಿ ಪೀಪಲ್ ಆಕ್ಟ್ 1991 ರ ಸೆಕ್ಷನ್ 29 ಎ ಅಡಿಯಲ್ಲಿ ಯಾವುದೇ ಸಂಘ ಅಥವಾ ಭಾರತೀಯ ನಾಗರಿಕರು ವೈಯಕ್ತಿಕ ರಾಜಕೀಯ ಪಕ್ಷವಾಗಿ ನೋಂದಣಿಗೆ ಅವಕಾಶವಿದ್ದು, ಭಾರತೀಯ ಜನಶಕ್ತಿ ಕಾಂಗ್ರೇಸ್ ರಾಜಕೀಯ ಪಕ್ಷವಾಗಿ ಅರ್ಜಿ ಸಲ್ಲಿಸಿದ್ದು, ಸದರಿ ಪಕ್ಷವು 2019 ರ ಅಂದರೆ ಕಳೆದ ಆರು ವರ್ಷಗಳಿಂದ ಪಕ್ಷದ ಅಭ್ಯರ್ಥಿಯಾಗಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಅಥವಾ ಅವುಗಳ ಉಪ ಚುನಾವಣೆಯಲ್ಲಿ ಸ್ಪರ್ಧೆಸದೇ ಇರುವುದು ಚುನಾವಣೆ ದಾಖಲೆಯಲ್ಲಿ ಕಂಡುಬಂದಿರುತ್ತದೆ.
ಸದರಿ ಪಕ್ಷವು ರಾಜಕೀಯ ಚಟುವಟಿಕೆ ಕಾರ್ಯನಿರ್ವಹಿಸದೇ ಇರುವ ಹಿನ್ನೆಲೆ, ಕರ್ನಾಟಕ ಚುನಾವಣಾ ಆಯೋಗವು ಭಾರತದ ಸಂವಿಧಾನದ 324 ನೇ ವಿಧಿ ಹಾಗೂ ರೆಪ್ರೆಸೆಂಟೇಟಿವ್ ಆಫ್ ಪೀಪಲ್ ಆಕ್ಟ್ 1991 ರ ಸೆಕ್ಷನ್ 29 ಎ ಅಡಿಯಲ್ಲಿ ಭಾರತೀಯ ಜನಶಕ್ತಿ ಕಾಂಗ್ರೇಸ್ ಪಕ್ಷದ ನೋಂದಾಯಿತ ಪಕ್ಷಗಳ ಪಟ್ಟಿಯಿಂದ ಕೈಬಿಡಲು ಪ್ರಸ್ತಾಪಿಸಿ, ನೋಟೀಸ್ ನೀಡಿದೆ.
ಸದರಿ ಪಕ್ಷದ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಯವರು ಪೂರಕ ದಾಖಲೆಗಳೊಂದಿಗೆ ಪ್ರಮಾಣ ಪತ್ರವನ್ನು 2025 ಸೆಪ್ಟಂಬರ್ 1 ರ ಒಳಗೆ ಸಲ್ಲಿಸಲು ಅವಕಾಶ ನೀಡಿ, ಸದರಿ ದಿನದಂದು ಪಕ್ಷದ ವಿಚಾರಣೆ ನಿಗಧಿಪಡಿಸಿ, ಚುನಾವಣಾ ಆಯೋಗವು ನೋಟೀಸ್ ನೀಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.