ಉಡುಪಿ, ಅ 10: ಕರಾವಳಿ ನಿಯಂತ್ರಣ ವಲಯದ ನಿರಪೇಕ್ಷಣಾ ಪತ್ರ ಕೋರಿ ಬರುವ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಅಭಿವೃದ್ಧಿ ಪಡಿಸಿರುವ  PARIVESH PORTAL 2.0 ನ ಮೂಲಕವೇ ಸಲ್ಲಿಸುವಂತೆ ಸರ್ಕಾರವು ನಿರ್ದೇಶನ ನೀಡಿರುತ್ತದೆ.

ಆದ್ದರಿಂದ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರು ವಾಸ್ತವ್ಯ, ವಾಣಿಜ್ಯ, ಕೈಗಾರಿಕೆ, ಸರ್ಕಾರಿ ಯೋಜನೆಗಳ ಕಟ್ಟಡ ನಿರ್ಮಾಣದ ಪ್ರಸ್ತಾವನೆಗಳನ್ನು ಕರಾವಳಿ ನಿಯಂತ್ರಣ ವಲಯದ ನಿರಪೇಕ್ಷಣಾ ಪತ್ರ ಕೋರಿ ಅರ್ಜಿಗಳನ್ನು PARIVESH PORTAL 2.0 ನಲ್ಲಿ ಮಾತ್ರ ಸಲ್ಲಿಸಬೇಕಾಗಿರುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಹಾಗೂ PARIVESH PORTAL 2.0 ಬಳಕೆಯ ಬಗ್ಗೆ ಸಂದೇಹಗಳ ನಿವಾರಣೆಗಾಗಿ ಮತ್ತು ಮಾರ್ಗದರ್ಶನಕ್ಕಾಗಿ ಪ್ರಾದೇಶಿಕ ನಿರ್ದೇಶಕರು, (ಪರಿಸರ) ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.