ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಭಾರತೀಯ ಜನತಾ ಪಕ್ಷದ ಮುಲ್ಕಿ ಮೂಡುಬಿದಿರೆ ಮಂಡಲದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಭ್ಯಾಸ ವರ್ಗ ಆಗೋಸ್ಟ 3 ರಂದು ಉದ್ಘಾಟನೆ ನೆರವೇರಿತು. ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟನೆ ನೆರವೇರಿಸಿ ಇಂತಹ ಕಾರ್ಯಕ್ರಮಗಳನ್ನು ಪಕ್ಷದ ಮುಂದಾಳುಗಳಿಗೆ, ಕಾರ್ಯಕರ್ತರುಗಳಿಗೆ ಪ್ರತೀ ಹಂತದಲ್ಲೂ ನಡೆಸುವುದರಿಂದ ಪಕ್ಷ ಬಲಿಷ್ಠಗೊಂಡು ಬೆಳೆಯಲು ಸಾಧ್ಯ ಎಂದರು. ವೇದಿಕೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಮುಂದಾಳುಗಳು ಹಾಜರಿದ್ದರು.