ಉಡುಪಿ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು- 576101 ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪರೀಕ್ಷೆ ಬರೆದ 112 ವಿದ್ಯಾರ್ಥಿನಿಯರಲ್ಲಿ 110 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ 98.2% ಫಲಿತಾಂಶ ದಾಖಲಾಗಿರುತ್ತದೆ.

102 ಜನ ವಿದ್ಯಾರ್ಥಿನಿಯರು 60% ಕ್ಕೂ ಹೆಚ್ಚು ಅಂಕಗಳಿಸಿರುತ್ತಾರೆ. 38 ವಿದ್ಯಾರ್ಥಿನಿಯರು 85% ಕ್ಕೂ ಹೆಚ್ಚು ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. 22 ಜನ ವಿದ್ಯಾರ್ಥಿನಿಯರು ಎ+ ಗ್ರೇಡ್ (>90%) ಗಳಿಸಿರುತ್ತಾರೆ. ಸಂಸ್ಥೆಯ ಆಂಗ್ಲಮಾಧ್ಯಮ ವಿಭಾಗದಲ್ಲಿ ಈ ವರ್ಷ ಕೂಡ 100% ಫಲಿತಾಂಶ ದಾಖಲಾಗಿರುವುದು ವಿಶೇಷ. 12 ಜನರು 600 ಕ್ಕಿಂತ ಹೆಚ್ಚು ಅಂಗ ಗಳಿಸಿದ್ದು ಗುಣಾತ್ಮಕತೆಯಲ್ಲಿ ಸಂಸ್ಥೆ 89.17 ಅಂಕ ಗಳಿಸುವುದರೊಂದಿಗೆ A Grade ಮಾನ್ಯತೆಯನ್ನು ಉಳಿಸಿಕೊಂಡಿದೆ.