ಉಜಿರೆ: ಬೆಂಗಳೂರಿನ ಮಾರುಕಟ್ಟೆ ಹೂವಿನ ವ್ಯಾಪಾರಸ್ಥರು  ಮತ್ತು  ಡೆಕೋರರ್ಸ್ ಹೂವು, ಹಣ್ಣು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು, ಅನ್ನಛತ್ರ, ಮೊದಲಾದ ಕಟ್ಟಡಗಳಿಗೆ ಅಲಂಕಾರ ಸೇವೆ ಮಾಡಿದರು.

ಅನಾನಸು, ಸೇಬು, ದ್ರಾಕ್ಷಿ, ತೆಂಗಿನಕಾಯಿ, ಕಲ್ಲಂಗಡಿ, ಕಬ್ಬು ಮೊದಲಾದವುಗಳನ್ನು ತಲಾ ಮುನ್ನೂರು ಕೆ.ಜಿ. ಬಳಸಲಾಗಿದೆ. ಲಿಲಿಯಂ, ಬಿ.ಒ.ಪಿ. ಆರ್ಕಿಡ್, ಗುಲಾಬಿ, ಗ್ಲಾಡಿಯೊ, ಕ್ಯೂಬ್‌ರೋಸ್ ಮೊದಲಾದ ಹೂವುಗಳನ್ನು ಬಳಸಲಾಗಿದೆ.

ಸುಮಾರು ಮುನ್ನೂರು ಮಂದಿ ಶ್ರಮವಹಿಸಿ ಅಲಂಕಾರ ಸೇವೆ ಮಾಡಿದ್ದು, ಸುಮಾರು ಹತ್ತು ಲಕ್ಷ ರೂ. ವೆಚ್ಚವಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ವಸ್ತುಪ್ರದರ್ಶನ ಮಂಟಪದಲ್ಲಿ ಬೆಂಗಳೂರಿನ ನೃತ್ಯ ಕುಟೀರ ತಂಡದವರಿಂದ ವಿದುಷಿ ದೀಪಾ ಭಟ್ ನಿರ್ದೇಶನದಲ್ಲಿ ನೃತ್ಯ ರೂಪಕ ನಡೆಯಿತು.