ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಬೆಳವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ 12ಕ್ಕೆ 12 ಸ್ಥಾನಗಳನ್ನು ಬಾಚಿಕೊಂಡು ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಸದಸ್ಯರುಗಳು ವಿಜೃಂಭಿಸಿದ್ದಾರೆ.
ವಿಜಯ ಸಾಧಿಸಿದ ಎಲ್ಲ ಸಹಕಾರ ಭಾರತೀಯ ಸದಸ್ಯರುಗಳಿಗೆ ಮುಲ್ಕಿ ಮೂಡುಬಿದರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಅಭಿನಂದಿಸಿದರು. ಸೇವಾ ಸಂಸ್ಥೆ ಇನ್ನಷ್ಟು ಉತ್ತಮ ಮೌಲ್ಯಯುತವಾದ ಕಾರ್ಯಕ್ರಮಗಳನ್ನು ಮಾಡಿ ಶ್ರೇಯಸ್ ಅನ್ನು ಪಡೆಯುವಂತಾಗಲಿ ಎಂದು ಹಾರೈಸಿದರು. ವಿಜಯ ಸಾಧಿಸಿದ ಭಾಸ್ಕರ್ ಕೋಟ್ಯಾನ್ ಮತ್ತು ಬೆಂಬಲಿಗರು ಹಾಜರಿದ್ದರು.