ಮೊನ್ನೆ ತಾನೆ ಪಡುವಣ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿಯ ಇಬ್ಬರು ಶಾಸಕರು ಇಂದು ಸ್ಪೀಕರ್ ಬಿಮನ್ ಬ್ಯಾನರ್ಜಿಯವರ ಕೈಗೆ ರಾಜೀನಾಮೆ ಕೊಟ್ಟು ಹೊರನಡೆದರು.

ಕೇಂದ್ರ ಬಿಜೆಪಿಯೇ ಇವರು ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಇವರಿಬ್ಬರೂ ರಣಘಾಟ್ ಮತ್ತು ಕೂಚ್‌ಬಿಹಾರ್ ಲೋಕ ಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರಾದ್ದರಿಂದ ಅವರಿಗೆ ಶಾಸಕ ಸ್ಥಾನ ಬಿಡುವಂತೆ ಸೂಚಿಸಲಾಗಿದೆ.

ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ಸಂಸದರಾದ ಲಾಕೆಟ್ ಚಟರ್ಜಿ, ಸ್ವಪನ್ ದಾಸ್ ಗುಪ್ತ ಸಹ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಸೋತಿರುವುದರಿಂದ ಅಲ್ಲೋ ಇಲ್ಲೋ ರಾಜೀನಾಮೆ ನೀಡುವುದು ತಪ್ಪಿದೆ.