ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮಹಿಳೆಯೊಬ್ಬರನ್ನು ಬಟ್ಟೆ ಬಿಚ್ಚಿ  ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿ ಸಿ. ಬಿ. ವೇದಮೂರ್ತಿ ತಿಳಿಸಿದ್ದಾರೆ.

ಇತ್ತೀಚೆಗೆ ವೈರಲ್ ಆದ ವೀಡಿಯೋದಲ್ಲಿ ಕಾಲಿಗೆ ಬೀಳುತ್ತೇನೆ, ಹೊಡೆಯಬೇಡಿ ಎಂದು ಮಹಿಳೆ ಬೇಡಿಕೊಳ್ಳುತ್ತಿದ್ದಾರೆ. ನಾಲ್ವರು ಯುವಕರು ಹೊಡೆದಿದ್ದಾರೆ.

ಏಳೆಂಟು ತಿಂಗಳ ಹಿಂದಿನ ವೀಡಿಯೋ ಇದಾಗಿದ್ದು, ಮಹಿಳೆ ಯಾರೆಂದು ಗೊತ್ತಾಗಿಲ್ಲ. ಪೋಲೀಸರು ಸದ್ಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.