ಈ ಬಾರಿಯ ವಿಶ್ವಕೊಂಕಣಿ ನಾಟಕ ಮಹೋತ್ಸವ ಹಾಗೂ ಡಾ ಪಿದಯಾನಂದ ಪೈವಿಶ್ವಕೊಂಕಣಿ ರಂಗ ಶ್ರೇಷ್ಟ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭ ಫೆಬ್ರವರಿ 8 ರಂದು ಶನಿವಾರ ಸಂಜೆ 4 ಘಂಟೆಗೆ ಸರಿಯಾಗಿ ನಗರದ ಟಿವಿ ರಮಣ ಪೈ ಸಭಾಂಗಣ, ಕೊಡಿಯಾಲ್-ಬೈಲ್ ಇಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಈ ಅಂತರಾಜ್ಯ ಕೊಂಕಣಿ ನಾಟಕ ಮಹೋತ್ಸವದಲ್ಲಿ ಎರಡು ಪ್ರಸಿದ್ಧ ಕೊಂಕಣಿ ನಾಟಕಗಳ ಪ್ರದರ್ಶನ ಜನಮನ ಗೆಲ್ಲಲಿದ್ದು, ನೆರೆಯ ಜಿಲ್ಲೆಗಳಿಂದ ನಾಟಕ ಪ್ರಿಯರನ್ನು ಆಕರ್ಷಿಸಲಿದೆ. ಈ ಸುಸಂದರ್ಭದಲ್ಲಿ ಪ್ರತಿಷ್ಟಿತ "ಡಾ ಪಿದಯಾನಂದ ಪೈವಿಶ್ವಕೊಂಕಣಿ ರಂಗಶ್ರೇಷ್ಟ" ಪ್ರಶಸ್ತಿಪ್ರದಾನವೂ ನಡೆಯಲಿದೆ.
ನೆರೆಯ ಮಹಾರಾಷ್ಟ್ರರಾಜ್ಯದ ಸುಧಾಕರ ಭಟ್ಇವರ ನೇತೃದ ಪ್ರಸಿದ್ಧ ಕಲಾತಂಡ “ಆಮ್ಮಿ ರಂಗಕರ್ಮಿ, ಮುಂಬೈ" ಇವರು“ಪೋಸ್ಟ್ಕಾರ್ಡ್”ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಕರ್ನಾಟಕ-ಕೇರಳ ರಾಜ್ಯಗಳನ್ನು ಪ್ರತಿನಿಧಿಸಿ, ಕಾಸರಗೋಡು ಚಿನ್ನಾ ಇವರ ನೇತೃತ್ವದ" ರಂಗ ಚಿನ್ನಾರಿ, ಕಾಸರಗೋಡು" ಇವರು ಅಭಿನಯಿಸುವ ಜನಪ್ರಿಯ "ಕರ್ಮಾಧೀನ" ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.
ಹಿರಿಯ ರಂಗಕರ್ಮಿ ಗುಲ್ವಾಡಿ ರಾಮದಾಸ್ದತ್ತಾತ್ರೇಯ ಭಟ್ಇವರು ಈ ಬಾರಿಯ "ಡಾ ಪಿದಯಾನಂದ ಪೈವಿಶ್ವಕೊಂಕಣಿ ರಂಗಶ್ರೇಷ್ಟ ಪ್ರಶಸ್ತಿ" ಸ್ವೀಕರಿಸಲಿದ್ದಾರೆ.
ಹಿರಿಯ ಸಾಹಿತಿ- ಅನುವಾದಕರಾಗಿರುವ ಡಾ ಗೀತಾ ಶೆಣೈಇವರು ಈ ವರ್ಷದ "ಡಾ ಪಿದಯಾನಂದ ಪೈವಿಶ್ವಕೊಂಕಣಿ ಅನುವಾದ ಪ್ರಶಸ್ತಿ" ಸ್ವೀಕರಿಸಲಿರುವರು.
ಕಲಾಸಕ್ತ ಕೊಂಕಣಿ ಬಾಂಧವರು ಈ ನಾಟಕಮಹೋತ್ಸವದಲ್ಲಿ ಭಾಗವಹಿಸಿ ಕೊಂಕಣಿ ರಂಗಕಲೆಯನ್ನು ಪ್ರೊತ್ಸಾಹಿಸಬೇಕಾಗಿ ವಿಶ್ವಕೊಂಕಣಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿಶ್ವಸ್ಥ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ