ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಯು ಲಲಿತ ಕಲೆಗಳ ಸಂಘಟಕ, ಯಕ್ಷಗಾನ ಹಾಡುಗಾರ ಪಿ ನಿತ್ಯಾನಂದ ರಾವ್ ಇವರ ಯಕ್ಷಗಾನ ಹಾಡುಗಳ ವೀಡಿಯೋ ದಾಖಲೀಕರಣವನ್ನು ಜುಲೈ 08 ರಂದು ನಡೆಸಿತು. ಇವರಿಗೆ ಚೆಂಡೆಯಲ್ಲಿ ಸೀತಾರಾಮ ತೋಳ್ಪಡಿತ್ತಾಯ, ಮದ್ದಲೆಯಲ್ಲಿ ಜಯರಾಮ ತೋಳ್ಪಡಿತ್ತಾಯ ಹಾಗೂ ಚಕ್ರತಾಳದಲ್ಲಿ ಸತೀಶ್ ತೋಳ್ಪಡಿತ್ತಾಯ ಸಹಕರಿಸಿದರು. ಹಿರಿಯ ಯಕ್ಷಗಾನ ಕಲಾವಿದರಾದ ಪಿ ಸತ್ಯಾನಂದ ರಾವ್ ಅವರು ಸಲಹಾಗಾರರಾಗಿ ಸಹಕರಿಸಿದರು.
ವಿಭು ರಾವ್ ತಾಂತ್ರಿಕ ಸಹಾಕರಾಗಿ ಸಹಕರಿಸಿದರು. ಉಸ್ತಾದ್ ರಾಫೀಕ್ ಖಾನ್, ಪಿ ಆನಂದ ರಾವ್, ಸುಮುಖ, ಶಶಿಧರ್ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.